ಮಲಪ್ಪುರಂ: ರೈಲಿನಲ್ಲಿ ಸರಿಯಾದ ಟಿಕೆಟ್ ಇಲ್ಲದೆ ಕಾಯ್ದಿರಿಸಿದ ಟಿಕೆಟ್ಗಳ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಯಾಣಿಕನೊಬ್ಬ ಟಿಕೆಟ್ ಪರೀಕ್ಷಕರೊಬ್ಬರ (ಟಿಟಿಇ) ಮೂಗಿಗೆ ಗುದ್ದಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕ್ರಮ್ ಕುಮಾರ್ ಮೀನಾ ಹಲ್ಲೆಗೊಳಗಾದ ಟಿಟಿಇ. ಭಾನುವಾರ ರಾತ್ರಿ ತಿರುವನಂತಪುರಂ-ಮಂಗಳೂರು ಮಾವೇಲಿ ಎಕ್ಸ್ಪ್ರೆಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ತಿರೂರ್ ಪ್ರದೇಶದ ಬಳಿ ರಾಜಸ್ಥಾನ ಮೂಲದ ಪ್ರಯಾಣಿಕನೊಬ್ಬ ಮೀನಾ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

ಆರೋಪಿಯು ಕಾಯ್ದಿರಿಸಿದ ಬೋಗಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ. ಇದನ್ನು ಪ್ರಶ್ನಿಸಿ ಸಾಮಾನ್ಯ ಕಂಪಾರ್ಟ್ಮೆಂಟ್ಗೆ ತೆರಳುವಂತೆ ಕೇಳಿದ್ದಕ್ಕಾಗಿ ಟಿಟಿಇ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕೋಯಿಕ್ಕೋಡ್ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಟಿಇಗೆ ಸ್ಥಳೀಯ ಆಸ್ಪತ್ರೆಯಲ್ಲಿ ನೀಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.