ಕೊಚ್ಚಿ: ಬಹುಭಾಷಾ ನಟಿ ಪ್ರಿಯಾಮಣಿ ಅವರು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಂಸ್ಥೆಯ ಜೊತೆಗೂಡಿ ಇಂದು (ಸೋಮವಾರ) ಕೇರಳದ ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಜೀವಂತ ಆನೆಯ ತದ್ರೂಪದಂತಹ ಯಾಂತ್ರಿಕ ಆನೆಯನ್ನು ದಾನ ನೀಡಿದ್ದಾರೆ.

ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನದಲ್ಲಿ ಜೀವಂತ ಆನೆಗಳನ್ನು ದೇವಸ್ಥಾನದ ಆಚರಣೆಗೆ ಬಳಕೆ ಮಾಡದಂತೆ ಅಥವಾ ಬಾಡಿಗೆ ಪಡೆಯದಂತೆ ನಿರ್ಧಾರ ಮಾಡಲಾಗಿದೆ.

ಪ್ರಿಯಾಮಣಿ ಅವರು ದಾನ ನೀಡಿರುವ ಯಾಂತ್ರಿಕ ಆನೆಗೆ ‘ಮಹಾದೇವನ್’ ಎಂದು ನಾಮಕರಣ ಮಾಡಲಾಗಿದ್ದು, ದೇವಸ್ಥಾನದ ಆಚರಣೆಯಲ್ಲಿ ಸುರಕ್ಷಿತ ಮತ್ತು ಭಯ ಮುಕ್ತವಾಗಿ ಬಳಕೆ ಮಾಡಬಹುದಾಗಿದೆ ಎಂದು ಪೇಟಾ ಪ್ರಕಟಣೆಯಲ್ಲಿ ತಿಳಿಸಿದೆ. ಕೇರಳದ ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ.

‘ಪೇಟಾದ ಜೊತೆಗೂಡಿ ಯಾಂತ್ರಿಕ ಆನೆ ದಾನ ನೀಡಿರುವುದು ತೃಪ್ತಿ ನೀಡಿದೆ. ಈ ಮೂಲಕ ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು. ಆಧುನಿಕ ತಂತ್ರಜ್ಞಾನಗಳು ಎಂದರೆ ನಾವು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಅಭ್ಯಾಸವನ್ನು ನಡೆಸಬಹುದು. ಈ ಮೂಲಕ ಪ್ರಾಣಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬಹುದು’ ಎಂದು ಪ್ರಿಯಾಮಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಆನೆ ದಾನದ ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನದ ಮಾಲೀಕ ತೆಕ್ಕಿಣಿಯೆದತ್ ವಲ್ಲಭನ್ ಮಾತನಾಡಿ, ಈ ಯಾಂತ್ರಿಕ ಆನೆ ‘ಮಹಾದೇವನ್’ ಅನ್ನು ಬಳಸಲು ನಮಗೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನ ಮೊದಲ ಬಾರಿಗೆ ಹಬ್ಬಗಳಲ್ಲಿ ಜೀವಂತ ಪ್ರಾಣಿಗಳ ಬಳಕೆ ಮಾಡುವುದಿಲ್ಲ. ಬದಲಾಗಿ ದೇಗುಲದ ಸಂಪ್ರದಾಯಗಳ ಆಚರಣೆಗೆ ಯಾಂತ್ರಿಕ ಆನೆ ಬಳಕೆ ಮಾಡಲು ನಿರ್ಧರಿಸುವುದಾಗಿ ತಿಳಿಸಿತ್ತು. ಅದರಂತೆ ಮೊದಲ ಯಾಂತ್ರಿಕ ಆನೆ ತ್ರಿಶೂರ್ ದೇಗುಲದಲ್ಲಿ ಕಾಣಿಸಿಕೊಂಡಿತ್ತು. ಈ ಯಾಂತ್ರಿಕ ಆನೆಯ ಬೆಲೆ ₹5 ಲಕ್ಷ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.