ನವದೆಹಲಿ: 2021ರಿಂದ 24ರ ಅವಧಿಯಲ್ಲಿ ಕೈಗೊಂಡ ವಿಶೇಷ ಸ್ವಚ್ಛತಾ ಅಭಿಯಾನದ ವೇಳೆ ಗುಜರಿ ವಸ್ತುಗಳ ವಿಲೇವಾರಿಯಿಂದ ಕೇಂದ್ರಕ್ಕೆ ₹2,364 ಕೋಟಿ ವರಮಾನ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ.

ಇಂತಹ ಸಾಮೂಹಿಕ ಪ್ರಯತ್ನವು ಸುಸ್ಥಿರವಾದ ಫಲಿತಾಂಶವನ್ನು ತಂದುಕೊಡಬಲ್ಲದು ಎಂಬುದನ್ನು ತೋರಿಸಿದೆ. ಸ್ವಚ್ಛತೆ ಮತ್ತು ಆರ್ಥಿಕ ವಿವೇಕ ಎರಡನ್ನೂ ಸರ್ಕಾರದ ಈ ವಿಶೇಷ ಅಭಿಯಾನ ಉತ್ತೇಜಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಒಟ್ಟಾರೆಯಾಗಿ, 2021-24ರ ನಡುವೆ ಸರ್ಕಾರ ನಡೆಸಿದ ವಿಶೇಷ ಅಭಿಯಾನಗಳು ಗುಜರಿ ವಸ್ತುಗಳ ವಿಲೇವಾರಿ ಮೂಲಕ ₹2,364 ಕೋಟಿ ಆದಾಯವನ್ನು ಗಳಿಸಿಕೊಟ್ಟಿವೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ವಿಶೇಷ ಸ್ವಚ್ಛತಾ ಅಭಿಯಾನ 4.0 ಕುರಿತು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿರುವ ಮೋದಿ, ‘ಶ್ಲಾಘನೀಯ! ಸಮರ್ಥ ನಿರ್ವಹಣೆ ಮತ್ತು ಪೂರ್ವಭಾವಿ ಕ್ರಮದ ಮೇಲೆ ಕೇಂದ್ರೀಕರಿಸುವ ಮೂಲಕ ಈ ಪ್ರಯತ್ನವು ಉತ್ತಮ ಫಲಿತಾಂಶಗಳನ್ನು ಸಾಧಿಸಿದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.

ವಿಶೇಷ ಅಭಿಯಾನ 4.0 ಈ ವರ್ಷದ ಅಕ್ಟೋಬರ್ 2ರಿಂದ 31ರ ನಡುವೆ ₹650 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ. ಈ ವಿಶೇಷ ಅಭಿಯಾನವು 5.97 ಲಕ್ಷಕ್ಕೂ ಹೆಚ್ಚು ತಾಣಗಳಲ್ಲಿ ಸ್ವಚ್ಛತೆ ಕೈಗೊಂಡಿದೆ ಮತ್ತು ಪರಿಣಾಮಕಾರಿ ಕಚೇರಿ ಬಳಕೆಗಾಗಿ 190 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಿದೆ ಎಂದು ಸಿಬ್ಬಂದಿ ಸಚಿವಾಲಯ ಶನಿವಾರ ಪ್ರಕಟಣೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.