ನವದೆಹಲಿ: ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಅವರು ಇಂದು ತಮ್ಮ 88ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ದಲೈ ಲಾಮಾ ಅವರೊಂದಿಗೆ ಮಾತನಾಡಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.

6 ಜುಲೈ 1935ರಲ್ಲಿ ಟಿಬೆಟ್‌ನಲ್ಲಿ ಜನಿಸಿದ ದಲೈ ಲಾಮಾ ಅವರು, 1959ರಲ್ಲಿ ಚೀನಾದ ಆಕ್ರಮಣಕಾರಿ ನಡೆಗೆ ಬೇಸತ್ತು ಟಿಬೆಟ್‌ನಿಂದ ಭಾರತಕ್ಕೆ ವಲಸೆ ಬರುತ್ತಾರೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಎಂಬಲ್ಲಿ ಇವರು ನೆಲೆ ನಿಲ್ಲುತ್ತಾರೆ. ಬೌದ್ಧ ಧರ್ಮದ ಪ್ರವರ್ತಕರಾದ ಇವರಿಗೆ 1969ರಲ್ಲಿ ನೊಬೆಲ್ ಪ್ರಶಸ್ತಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.