ನವದೆಹಲಿ: ಸರ್ಕಾರಿ ಒಡೆತನದ ವಿದ್ಯುತ್ ಉತ್ಪಾದನಾ ಕಂಪನಿ ಎನ್‌ಟಿಪಿಸಿಯ ₹30,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 04 ರಂದು ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಎನ್‌ಟಿಪಿಸಿಯ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಎನ್‌ಟಿಪಿಸಿಯ ಸೂಪರ್ ಥರ್ಮಲ್ ಪವರ್ ಯೋಜನೆಯ(ಹಂತ–1) ಎರಡನೇ ಘಟಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

₹8,007 ಕೋಟಿ ಹೂಡಿಕೆಯ ಈ ಯೋಜನೆಯು ಅಲ್ಟ್ರಾ ಸೂಪರ್ ಕ್ರಿಟಿಕಲ್ ತಂತ್ರಜ್ಞಾನದ ಮೂಲಕ CO2 ಅನಿಲ ಹೊರಸೂಸುವಿಕೆ ತಗ್ಗಿಸುವ ಜೊತೆಗೆ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ವೃದ್ಧಿಸಲಿದೆ ಎಂದು ಅದು ಹೇಳಿದೆ.

ಈ ಯೋಜನೆಯು ತೆಲಂಗಾಣದಲ್ಲಿ ವಿದ್ಯುತ್ ಸರಬರಾಜನ್ನು ವೃದ್ಧಿಸುವುದು ಮಾತ್ರವಲ್ಲದೆ, ದೇಶದಾದ್ಯಂತ 24x7 ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಜಾರ್ಖಂಡ್‌ನ ಉತ್ತರ ಕರಣ್‌ಪುರದ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್(3x600 ಮೆ.ವ್ಯಾ) ಎರಡನೇ ಘಟಕವನ್ನೂ ಮೋದಿ ಉದ್ಘಾಟಿಸಲಿದ್ದಾರೆ. ₹4,609 ಕೋಟಿ ಹೂಡಿಕೆಯ ಈ ಯೋಜನೆಯು ಭಾರತದ ಮೊದಲ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಯೋಜನೆಯಾಗಿದ್ದು, ಏರ್ ಕೂಲ್ಡ್ ಕಂಡೆನ್ಸರ್ ತಂತ್ರಜ್ಞಾನ ಹೊಂದಿದೆ.

ಉತ್ತರ ಪ್ರದೇಶದ ಸೋನೆಭದ್ರದಲ್ಲಿ ₹17,000 ಕೋಟಿ ವೆಚ್ಚದ ಸಿಂಗ್ರೌಲಿ ಸೂಪರ್ ಥರ್ಮಲ್ ಪವರ್ ಯೋಜನೆಯ 3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಥರ್ಮಲ್ ಪವರ್ ಕೇಂದ್ರ, ಗ್ರೇಟರ್ ನೋಯ್ಡಾದ ಗ್ರೀನ್ ಹೋಡ್ರೋಜನ್ ಘಟಕಕ್ಕೆ ಚಾಲನೆ ನೀಡಲಿದ್ದಾರೆ.

ಛತ್ತೀಸ್‌ಗಢದ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಅಡಿಗಲ್ಲು ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಲಿದ್ದಾರೆ. ಈ ಯೋಜನಾ ವೆಚ್ಚ ₹294 ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.