ನವದೆಹಲಿ: ಆರ್ಎಸ್ಎಸ್ ಚುಟವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವಿಕೆಯ ಮೇಲಿನ ನಿಷೇಧವನ್ನು ತೆರವುಗೊಳಿಸಲು ಹೊರಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸರ್ಕಾರಿ ನೌಕರರನ್ನು ರಾಜಕೀಯಗೊಳಿಸಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
.ಭಾರತದ ಬೆಳವಣಿಗೆಯ ಹಾದಿಯಲ್ಲಿ ಬಂಡವಾಳ ಮಾರುಕಟ್ಟೆಯ ಪಾತ್ರ ಮಹತ್ವದ್ದು: ನಿರ್ಮಲಾ.ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ: ಆಶಿಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಜಾಮೀನು.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ಈ ನಿಲುವು ಸರ್ಕಾರಿ ನೌಕರರ ತಟಸ್ಥತೆಯ ಭಾವನೆಗೆ ಸವಾಲಾಗಿದೆ. 1947ರಲ್ಲಿ ಭಾರತವು ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡಿತ್ತು. ಆದರೆ ಆರ್ಎಸ್ಎಸ್ ಇದನ್ನು ವಿರೋಧಿಸಿತ್ತು ಆರ್ಎಸ್ಎಸ್ನ ಈ ಧೋರಣೆಯನ್ನು ಖಂಡಿಸಿದ್ದ ಸರ್ಧಾರ್ ವಲ್ಲಭಾ ಬಾಯಿ ಪಟೇಲ್ ಅವರು ಸಂಘಕ್ಕೆ ಎಚ್ಚರಿಕೆ ನೀಡಿದ್ದರು.

ಗಾಂಧೀಜಿ ಹತ್ಯೆಯ ಬಳಿಕ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಆರ್ಎಸ್ಎಸ್ ಅನ್ನು ನಿಷೇಧಿಸಿದ್ದರು. 1966ರಲ್ಲಿ ಆರ್ಎಸ್ಎಸ್ ಚುಟವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದನ್ನು ನಿಷೇಧಿಸಿದ್ದರು. 58 ವರ್ಷಗಳ ಬಳಿಕ ಮೋದಿ ಅವರು ನಿಷೇಧವನ್ನು ತೆರವುಗೊಳಿಸುತ್ತಿರುವುದು ಸೂಕ್ತವಾದದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.ಕಾಂವಡ್ ಯಾತ್ರೆ:UP ಸರ್ಕಾರದ ‘ಹೆಸರು ಪ್ರದರ್ಶನ’ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ.Union Budget 2024: ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ನಿರ್ಮಲಾ ಸೀತಾರಾಮನ್.
ಸರ್ಕಾರಿ ನೌಕರರು ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯ ಮೇಲಿನ ನಿಷೇಧವನ್ನು ತೆರವುಗೊಳಿಸುವ ಮೂಲಕ ಮೋದಿ ಅವರು ಸರ್ಕಾರಿ ಕಚೇರಿಗಳು ಮತ್ತು ಉದ್ಯೋಗಿಗಳನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.

ಮೋದಿ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದಾಗಿ ಹಿಂಬಾಗಿಲಿನ ಮೂಲಕ ತನ್ನ ಕಾರ್ಯ ಸಾಧಿಸಲು ಹೊರಟಿದೆ. ಈ ಬೆಳವಣಿಗೆಯು ಸಂವಿಧಾನವನ್ನು ಹಾಳುಮಾಡಲು ನಡೆಸುತ್ತಿರುವ ಪ್ರಯತ್ನವಾಗಿದೆ ಎಂದು ಖರ್ಗೆ ಟೀಕಾಪ್ರಕಾರ ನಡೆಸಿದ್ದಾರೆ.
.ಮೋದಿ, ಒಬಾಮ, ಬೈಡನ್ ರ್ಯಾಂಪ್ ವಾಕ್ ಮಾಡಿದರೆ ಹೇಗಿರುತ್ತೆ? AI ವಿಡಿಯೊ ನೋಡಿ.ಹೆಚ್ಚಿನ ಪಂದ್ಯಗಳಿಗೆ ರೋಹಿತ್, ಕೊಹ್ಲಿ ಲಭ್ಯ: ಗೌತಮ್ ಗಂಭೀರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.