ನವದೆಹಲಿ: ದೆಹಲಿಯ ಸಿವಿಲ್ ಲೇನ್ಸ್‌ನಲ್ಲಿರುವ ಗುಜರಾತಿ ಸಮಾಜ ಭವನದ ಬಳಿ ಇಬ್ಬರು ದುಷ್ಕರ್ಮಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಸೋದರನ ಪುತ್ರಿ ದಮಯಂತಿ ಬೆನ್ ಮೋದಿ ಅವರ ಪರ್ಸ್ ದೋಚಿಪರಾರಿಯಾಗಿದ್ದಾರೆ.

ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪರ್ಸ್ ಕಳೆದುಕೊಂಡ ಮಹಿಳೆ ನರೇಂದ್ರ ಮೋದಿ ಅವರ ಸೋದರ ಪ್ರಹ್ಲಾದ್ ಮೋದಿ ಅವರ ಪುತ್ರಿ.

ಅಮೃತಸರದಿಂದ ದೆಹಲಿಗೆ ಬಂದಿದ್ದ ದಮಯಂತಿ, ಉಳಿದುಕೊಳ್ಳಲೆಂದು ಗುಜರಾತ್ ಸಮಾಜ ಭವನದಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಗುಜರಾತ್ ಭವನದ ಬಳಿಆಟೋದಿಂದ ಕೆಳಗಿಳಿಯುವ ವೇಳೆಅವರ ಬಳಿಗೆ ಬಂದ ದುಷ್ಕರ್ಮಿಗಳು ಪರ್ಸ್ ಕಸಿದು ಪರಾರಿಯಾಗಿದ್ದಾರೆ.

ಪರ್ಸ್‌ನಲ್ಲಿ ₹56 ಸಾವಿರ ಹಣವಿತ್ತು. ಎರಡು ಮೊಬೈಲ್ ಫೋನ್‌ಗಳಿದ್ದವು. ಜತೆಗೆ ಕೆಲ ಪ್ರಮುಖ ದಾಖಲೆಗಳಿದ್ದವು ಎಂದು ದಮಯಂತಿ ತಿಳಿಸಿದ್ದಾರೆ.

ದೆಹಲಿಯ ಲೆಫ್ಟಿನೆಂಟ್ ಗರ್ವನರ್ ನಿವಾಸ ಮತ್ತು ಮುಖ್ಯಮಂತ್ರಿ ನಿವಾಸದಿಂದ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದೆ.
ಘಟನೆ ಬಗ್ಗೆ ದಮಯಂತಿ ಅವರು ದೆಹಲಿ ಪೊಲೀಸರಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆದಿದೆ.

‘ಪರ್ಸ್ ಕಸಿದ ಬಗ್ಗೆ ನಮಗೆ ದೂರು ಬಂದಿದೆ. ಘಟನೆ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ಶೀಘ್ರವೇ ದುಷ್ಕರ್ಮಿಗಳನ್ನು ಬಂದಿಸುತ್ತೇವೆ,’ ಎಂದು ಉತ್ತರ ದೆಹಲಿಯ ಡಿಸಿಪಿ ಮೋನಿಕಾ ಭಾರದ್ವಾಜ್‌ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.