ನವದೆಹಲಿ: ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ವಿದೇಶ ಪ್ರವಾಸದ ಲೆಕ್ಕವನ್ನು ಕೇಂದ್ರ ಸರ್ಕಾರ ಸಂಸತ್ಗೆ ತಿಳಿಸಿದೆ.

ಕೇರಳದ ಸಿಪಿಐ(ಎಂ) ಸದಸ್ಯ ಎಳಮರಂ ಕರೀಂ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ, ವಿದೇಶಾಂಗ ವ್ಯವಹಾರ ಇಲಾಖೆಯ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಉತ್ತರಿಸಿದರು.

ಕೆಲ ದಿನಗಳ ಹಿಂದಷ್ಟೇ ಇಂಡೋನೇಷ್ಯಾದಲ್ಲಿ ನಡೆದ ಜಿ–20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಆ ಪ್ರವಾಸಕ್ಕೆ ₹ 32,09,760 ವೆಚ್ಚವಾಗಿದೆ. ಸೆಪ್ಟೆಂಬರ್ 26–28ರ ಜಪಾನ್ ಪ್ರವಾಸಕ್ಕೆ ₹ 23,86,536 ವೆಚ್ಚವಾಗಿದೆ.

ಇದೇ ವರ್ಷದಲ್ಲಿ ಪ್ರಧಾನಿಯವರ ಯೂರೋಪ್ ಪ್ರವಾಸಕ್ಕೆ ₹ 2,15,61,304 ಖರ್ಚಾದರೇ, 2019 ಸೆಪ್ಟೆಂಬರ್ 21–28 ನಡುವಿನ ಅಮೆರಿಕ ಪ್ರವಾಸಕ್ಕೆ ₹ 2,15,61,304 ಖರ್ಚಾಗಿದೆ ಎಂದು ಮುರಳೀಧರನ್ ಮಾಹಿತಿ ನೀಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವು, ಮಿತ್ರ ರಾಷ್ಟ್ರಗಳ ಜತೆಗಿನ ಸಂಬಂಧ ಗಟ್ಟಿಗೊಳಿಸಿದ್ದಲ್ಲದೇ, ಭಾರತ ದೃಷ್ಟಿಕೋನವನ್ನು ಪ್ರಸ್ತುತ ಪಡಿಸಲು ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಜಾಗತಿಕ ಕಾರ್ಯಸೂಚಿ ರೂಪಿಸಲು ಸಹಾಯಕವಾಗಿದೆ‘ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.