ಪ್ರಯಾಗರಾಜ್ (ಉತ್ತರ ಪ್ರದೇಶ): ಪಾಕ್ ಆಕ್ರಮಿತ ಕಾಶ್ಮೀರ ( ಪಿಒಕೆ ) ಭಾರತಕ್ಕೆ ಸೇರಿದ್ದು , ನಾವು ಅದನ್ನು ವಾಪಸ್ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ನೀರಜ್ ತ್ರಿಪಾಠಿ ಪರ ಮತ ಯಾಚಿಸಲು ಪ್ರಯಾಗರಾಜ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಭಾರತ ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಫಾರೂಕ್ ಅಬ್ದುಲ್ಲಾ ಮತ್ತು ಮಣಿಶಂಕರ್ ಅಯ್ಯರ್ ಹೇಳುತ್ತಾರೆ. ಆದರೆ ಪಿಓಕೆ ನಮಗೆ ಸೇರಿದ್ದು ಎಂದು ಈ ಪವಿತ್ರ ಭೂಮಿ ಪ್ರಯಾಗರಾಜ್ನಲ್ಲಿ ನಿಂತು ನಾನು ಹೇಳುತ್ತೇನೆ‘ ಎಂದಿದ್ದಾರೆ.
.ಪಿಒಕೆ ಭಾರತಕ್ಕೆ ಸೇರಿದ್ದು, ಅದನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ: ಅಮಿತ್ ಶಾ.
ಮೇ 25 ರಂದು ಅಲಹಾಬಾದ್ ಲೋಕಸಭಾ ಕ್ಷೇತ್ರದಲ್ಲಿ 6ನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರ ಪುತ್ರ ನೀರಜ್ ತ್ರಿಪಾಠಿ ಬಿಜೆಪಿಯಿಂದ, ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭಾ ಸಂಸದ ರೇವತಿ ರಮಣ್ ಸಿಂಗ್ ಅವರ ಪುತ್ರ ಉಜ್ವಲ್ ರಾಮ್ ಸಿಂಗ್ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ.
.ಪಿಒಕೆ ಭಾರತಕ್ಕೆ ಸೇರಿದ್ದು,ಯಾವುದೇ ಬೆಲೆ ತೆತ್ತಾದರೂ ಹಿಂಪಡೆಯುತ್ತೇವೆ: ಅಮಿತ್ ಶಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.