ಮುಂಬೈ: ಸಾಮಾಜಿಕ ಮಾಧ್ಯಮಗಳ ಬೆಳವಣಿಗೆ ಮತ್ತು ಸಮುದಾಯಗಳಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯು ಧ್ರುವೀಕರಣಕ್ಕೆ ಪ್ರಮುಖ ಕಾರಣ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ಭಾರತವು ಇದರಿಂದ ಹೊರತಾಗಿಲ್ಲ ಎಂದರು.

ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಭಾರತದ ಬಹು ಸಂಸ್ಕೃತಿಯು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ ಎಂದರು.

‘ಎಡ–ಬಲ–ಮಧ್ಯ ಹೀಗೆ.... ಜಗತ್ತಿನಾದ್ಯಂತ ನಾವು ರಾಜಕೀಯ ಧ್ರುವೀಕರಣದ ಪರಿಸ್ಥಿತಿಯನ್ನು ಕಾಣಬಹುದು. ಭಾರತವೂ ಇದರಿಂದ ಹೊರತಾಗಿಲ್ಲ. ಸಾಮಾಜಿಕ ಮಾಧ್ಯಮಗಳ ಬೆಳವಣಿಗೆ, ಸಮುದಾಯಗಳ ನಡುವಿನ ಅಸಹಿಷ್ಣುತೆ ಮತ್ತು ಯುವ ಜನತೆಯಲ್ಲಿ ಗಮನ ಕೇಂದ್ರೀಕರಿಸುವ ಸಮಸ್ಯೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ’ ಎಂದರು.

‘ಧ್ರುವೀಕರಣ ಎನ್ನುವುದು ಪ್ರತ್ಯೇಕವಾದ ವಿದ್ಯಮಾನವಲ್ಲ. ಮುಕ್ತ ಮಾರುಕಟ್ಟೆ ಮತ್ತು ತಂತ್ರಜ್ಞಾನದ ಉತ್ಪನ್ನವಿದು’ ಎಂದು ಹೇಳಿದರು.

‘ಭಾರತ ಸೇರಿದಂತೆ ಹಲವಾರು ದೇಶಗಳು 75 ವರ್ಷದ ಹಿಂದೆಯೇ ಸ್ವಾತಂತ್ರ್ಯವನ್ನು ಪಡೆದುಕೊಂಡಿವೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಸ್ವ ಆಡಳಿತ ಸ್ಥಾಪಿಸುವಲ್ಲಿ ಹಲವಾರು ದೇಶಗಳು ವಿಫಲವಾದವು. ಆದರೆ ಭಾರತ ಅವುಗಳಿಗಿಂತ ಭಿನ್ನವಾಗಿದೆ’ ಎಂದರು.

‘ಬಹು ಸಂಸ್ಕೃತಿ ಮತ್ತು ಎಲ್ಲ ಸಂಸ್ಕೃತಿಯನ್ನು ಒಳಗೊಳ್ಳುವಿಕೆಯಲ್ಲಿಯೇ ನಮ್ಮ ರಾಷ್ಟ್ರದ ಶಕ್ತಿ ಅಡಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.