ಪುದುಚೇರಿ: ಪುದುಚೇರಿಯ ವಿಲ್ಲಿಯನೂರ್‌ನಲ್ಲಿ ತಿರುಕಾಮೇಶ್ವರರ್ ದೇವಾಲಯದಲ್ಲಿ ನಡೆದ ರಥೋತ್ಸವದಲ್ಲಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ, ಗೃಹ ಸಚಿವ ಎ.ನಮಶಿವಾಯಂ ಹಾಗೂ ಪುದುಚೇರಿಯ ಲೆಪ್ಟಿನೆಂಟ್ ಗವರ್ನರ್ ಸಿ.ಪಿ ರಾಧಾಕೃಷ್ಣನ್ ಅವರು ರಥ ಎಳೆದಿದ್ದಾರೆ.

ಪ್ರತಿಪಕ್ಷ ಡಿಎಂಕೆ ನಾಯಕ ಆರ್. ಶಿವ ಸೇರಿದಂತೆ ಹಲವು ಗಣ್ಯರು ಹಾಗೂ ನೆರೆದ ಅಪಾರ ಸಂಖ್ಯೆಯ ಭಕ್ತರು ರಥ ಎಳೆದಿದ್ದಾರೆ.

ಇದೇ ವೇಳೆ ರಾಧಾಕೃಷ್ಣನ್ ಮತ್ತು ಇತರ ನಾಯಕರು ದೇವಾಲಯದ ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಪುದುಚೇರಿಯಲ್ಲಿ ಫ್ರೆಂಚ್ ಆಡಳಿತದಿಂದಲೂ ರಾಜ್ಯದ ಮುಖ್ಯಸ್ಥರು ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ ದೇವಾಲಯದ ರಥ ಎಳೆಯುವ ಪದ್ಧತಿ ಇದೆ.

ವಿಲ್ಲಿಯನೂರ್‌ನಲ್ಲಿರುವ ಈ ದೇವಾಲಯವನ್ನು 12ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ. ಪುದುಚೇರಿ ಮತ್ತು ತಮಿಳುನಾಡಿನ ನೆರೆಯ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಈ ರಥೋತ್ಸವ ಆಕರ್ಷಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.