ಹೈದರಾಬಾದ್: ಪೋಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ಕಲಾವಿದರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸ್ಯ ಕಲಾವಿದ, ಉದ್ಯಮಿ ಉತ್ಸವ್ ದೀಕ್ಷಿತ್ (33) ಚಲಾಯಿಸುತ್ತಿದ್ದ ಪೋಶೆ ಕಾರು ಶುಕ್ರವಾರ ಬೆಳಿಗ್ಗೆ 5.45ಕ್ಕೆ ಹೈದರಾಬಾದ್ನ ಕೆಬಿಆರ್ ಉದ್ಯಾನವನದ ಆವರಣ ಗೋಡೆ ಮತ್ತು ಮರಕ್ಕೆ ಡಿಕ್ಕಿ ಹೊಡೆದಿತ್ತು.

‘ಅಪಘಾತದಿಂದ ಉದ್ಯಾನದ ಕಬ್ಬಿಣದ ಕಂಬಿ ಮತ್ತು ಪಾದಾಚಾರಿ ಮಾರ್ಗಕ್ಕೆ ಹಾನಿಯಾಗಿತ್ತು. ಕಾರಿನ ಮುಂಭಾಗ ಹಾನಿಗೊಂಡಿತ್ತು. ನಾಗರಿಕರೊಬ್ಬರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳದಿಂದ ಪರಾರಿಯಾಗಿದ್ದ ಉತ್ಸವ್ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರಾಥಮಿಕ ತನಿಖೆಯ ಪ್ರಕಾರ, ಉತ್ಸವ್ ಅವರು ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾರಿನಲ್ಲಿ ಸಂಖ್ಯಾ ಫಲಕ ಇರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮುರಿದಿರುವ ಸಂಖ್ಯಾ ಫಲಕವು ಕಾರಿನ ಒಳಗಡೆ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.