ನವದೆಹಲಿ: ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣವ್ ಮುಖರ್ಜಿ ಅವರ ಆತ್ಮಕಥನದ ನಾಲ್ಕನೇ ಸಂಪುಟದ ಬಿಡುಗಡೆಯ ವಿಚಾರದಲ್ಲಿ ಅವರ ಮಕ್ಕಳ ನಡುವೆ ಜಗಳ ಶುರುವಾಗಿದೆ.

ವಿವಾದಿತ ಸಂಪುಟವನ್ನು ಮಾರುಕಟ್ಟೆಗೆ ಬಿಡುಗಡೆಮಾಡುವ ಮುನ್ನ ಪ್ರಕಾಶಕರು ಕಡ್ಡಾಯವಾಗಿ ತಮ್ಮ ಅನುಮತಿ ಪಡೆಯಬೇಕು ಎಂದು ಪ್ರಣವ್ ಅವರ ಪುತ್ರ ಅಭಿಜಿತ್ ಮುಖರ್ಜಿ ಹೇಳಿದ್ದಾರೆ. ಈ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸಬಾರದು ಎಂದು ಶರ್ಮಿಷ್ಠ ಮುಖರ್ಜಿ ಅವರು ಸಹೋದರನಿಗೆ ಸಲಹೆ ನೀಡಿದ್ದಾರೆ.

ಪ್ರಣವ್ ಅವರ ಆತ್ಮಕಥನದ ನಾಲ್ಕನೇ ಸಂಪುಟ ‘ದಿ ಪ್ರೆಸಿಡೆನ್ಷಿಯಲ್ ಇಯರ್ಸ್: 2012–2017’ ಕೃತಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ರೂಪಾ ಪಬ್ಲಿಕೇಷನ್ಸ್ ಹೋದ ವಾರ ಹೇಳಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ‘ನಿರಂಕುಶ ಶೈಲಿಯ ಕಾರ್ಯವೈಖರಿ’ಯನ್ನು ಪ್ರಯೋಗಿಸಿದರೆ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯುಪಿಎಯನ್ನು ಉಳಿಸುವುದರಲ್ಲೇ ‘ತಲ್ಲೀನ’ರಾಗಿದ್ದುದು ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಲೋಕಸಭೆ ಚುನಾವಣೆಗೂ ಮುನ್ನ (2014) ರಾಜಕೀಯ ಗುರಿ ಕಳೆದುಕೊಂಡಿದ್ದ ಕಾಂಗ್ರೆಸ್‌ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ‘ಅಸಮರ್ಥ’ರಾಗಿದ್ದರು ಎಂದು ಪ್ರಣವ್ ಈ ಕೃತಿಯಲ್ಲಿ ಬರೆದಿದ್ದಾರೆ. ಇದು ಸಾಕಷ್ಟು ವಿವಾದಕ್ಕೂ ಎಡೆಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.