ಲಂಡನ್: ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವರ ಅತ್ಮಕತೆ ‘ಸ್ಪೇರ್‘ ಮಂಗಳವಾರ ಯುಕೆಯಾದ್ಯಂತ ಬಿಡುಗಡೆಯಾಗಿದೆ. ಬಿಡುಗಡೆಯಾಗುವುದಕ್ಕೂ ಮುನ್ನ ಪುಸ್ತಕದ ಹಲವು ವಿಷಯಗಳು ಬಹಿರಂಗಗೊಂಡಿದ್ದು, ಭಾರಿ ಚರ್ಚೆಗೆ ಕಾರಣವಾಗಿತ್ತು.

ಸೋಮವಾರ ಮಧ್ಯರಾತ್ರಿಯಿಂದಲೇ ಪುಸ್ತಕ ಮಾರಾಟ ಆರಂಭವಾಗಿದ್ದು, ಹಲವು ಮಳಿಗೆಗಳಲ್ಲಿ ಶೇ 50 ರಷ್ಟು ರಿಯಾಯತಿ ಕೂಡ ನೀಡಲಾಗಿದೆ.

ಬ್ರಿಟನ್‌ನ ಹಾಲಿ ರಾಜ ಮೂರನೇ ಚಾರ್ಲ್ಸ್ (ಹ್ಯಾರಿ ಅವರ ತಂದೆ) ಹಾಗೂ ಪ್ರಿನ್ಸನ್ ಡಯಾನಾ (ಹ್ಯಾರಿ ಅವರ ತಾಯಿ) ಕುರಿತು ಪುಸ್ತಕದಲ್ಲಿ ಇರುವ ಹಲವು ಮಾಹಿತಿಗಳು ಸೋರಿಕೆಯಾಗಿದ್ದು, ಈ ಪುಸ್ತಕದಿಂದ ಬ್ರಿಟನ್ ರಾಜಮನೆತನೆಗಕ್ಕೆ ಮುಜುಗರ ಉಂಟಾಗುವ ಸಾಧ್ಯತೆ ಇದೆ.

ಈ ಪುಸ್ತಕದ 16 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಆಡಿಯೋ ಬುಕ್ ಕೂಡ ಲಭ್ಯವಿದೆ.

ಬ್ರಿಟನ್ ರಾಜನಿಗೆ ಆತಂಕ

ಈ ಪುಸ್ತಕದ ಪುಟದಲ್ಲಿ ಏನೇನಿದೆ ಎನ್ನುವುದರ ಕುರಿತು ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರಿಗೆ ಆತಂಕ ತಂದೊಡ್ಡಿದೆ. ಈಗಾಗಲೇ ಬಹಿರಂಗಗೊಂಡಿರುವ ಪುಸ್ತಕದ ಹಲವು ಪುಟಗಳಲ್ಲಿ ಚಾರ್ಲ್ಸ್ ಅವರ ಬಗ್ಗೆ ಉಲ್ಲೇಖ ಇದ್ದು, ಇನ್ನು ಏನೇನಿದೆ ಎನ್ನುವುದು ಅವರಿಗೆ ಕಳವಳ ತರಿಸಿದೆ ಎನ್ನಲಾಗಿದೆ.

ಡಯಾನ ಸಾವಿನ ಬಳಿಕ ಕ್ಯಾಮಿಲಾ ಅವರ ಜತೆ ಚಾರ್ಲ್ಸ್ ಅವರ ವಿವಾಹ, ವಿವಾಹಕ್ಕೂ ಮುನ್ನ ನಡೆದ ಮಾತುಕತೆ, ಅಣ್ಣ ವಿಲಿಯಂ ಜತೆಗಿನ ಸಂಘರ್ಷ, ಅಮ್ಮನ ನೆನಪು ಇವೆಲ್ಲವೂ ಹ್ಯಾರಿ ಅವರ ಪುಸ್ತಕದಲ್ಲಿ ಅಡಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.