ನವದೆಹಲಿ: ಸೈಬರ್, ಕ್ರಿಪ್ಟೊ ಅಪರಾಧಕ್ಕೆ ಸಂಬಂಧಿತ ₹1000 ಕೋಟಿಗೂ ಮಿಗಿಲಾದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಇದರ ಜೊತೆಗೆ ಇಂತಹ ಕಂಪನಿಗಳಿಂದ ಜಿಎಸ್ಟಿ ವಂಚನೆ ಏಪ್ರಿಲ್ 2019ರಿಂದ ನವೆಂಬರ್ 2022ರವರೆಗೆ ₹22,936 ಕೋಟಿ ಎಂದು ಕೇಂದ್ರ ಹೇಳಿದೆ.

ಈ ಬಗ್ಗೆ ಹಣಕಾಸು ಸಚಿವಾಲಯ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದು, ಜಾರಿ ನಿರ್ದೇಶನಾಲಯ ಸೈಬರ್ ಮತ್ತು ಕ್ರಿಪ್ಟೊ ಆಸ್ತಿ ವಂಚನೆಗೆ ಸಂಬಂಧಿತ ಹಲವು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ. ಇದನ್ನು ವಂಚನೆಗೆ ಸೇರಿಸಲಾಗಿದ್ದು, ಅದರಿಂದ ಬಂದ ಆದಾಯವನ್ನು ವಶಕ್ಕೆ ಪಡೆಯಲಾಗಿದೆ ಎಂದಿದೆ.

ಇದೇ ಅವಧಿಯಲ್ಲಿ ಆನ್ಲೈನ್ ಗೇಮಿಂಗ್ ಕಂಪನಿಗಳು ಸೇರಿದಂತೆ ಇಂತಹ ಕಂಪನಿಗಳ ಜಿಎಸ್ಟಿ ವಂಚನೆ ಕೂಡ ತನಿಖೆ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ.
ಇಂತಹ ಕಂಪನಿಗಳನ್ನು ರದ್ದುಗೊಳಿಸಲು ಸರ್ಕಾರ ಆಲೋಚಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಕಾನೂನಿನ ಅನ್ವಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.