ನವದೆಹಲಿ: ‘ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) 4 ರಿಂದ 6 ಹಡಗುಗಳು ಹಾಗೂ ಚೀನಾದ ಇತರೆ ಸಣ್ಣಪುಟ್ಟ ಹಡಗುಗಳುಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಭಾರತೀಯ ನೌಕಾಪಡೆ ಅವುಗಳ ಮೇಲೆ ನಿಗಾ ಇರಿಸಿದೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್
ಆರ್.ಹರಿಕುಮಾರ್ ಅವರು
ತಿಳಿಸಿದ್ದಾರೆ.

ನೌಕಾ ದಿನದ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಚೀನಾಗೆ ಸೇರಿದ ಕೆಲ ಸಂಶೋಧನಾ ಹಡಗುಗಳು ಹಾಗೂ ದೊಡ್ಡ ಸಂಖ್ಯೆಯ ಮೀನುಗಾರಿಕಾ ಹಡಗುಗಳು ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇತರೆ ದೇಶಗಳ ಸುಮಾರು 60 ಹಡಗುಗಳು ಕಾರ್ಯನಿರ್ವಹಿಸುತ್ತಿರುವುದರಿಂದಹಿಂದೂ ಮಹಾಸಾಗರವು ಬಹುದೊಡ್ಡ ಕಾರ್ಯತಂತ್ರದ ಕಡಲ ಕ್ಷೇತ್ರವಾಗಿ ಹೊರಹೊಮ್ಮಿದೆ. ಎಲ್ಲಾ ಬೆಳವಣಿಗೆಗಳನ್ನೂ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಾರತದ ಹಿತಾಸಕ್ತಿಗೆ ಧಕ್ಕೆ ಎದುರಾಗದಂತೆ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.

‘ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತದ ಕುರಿತು ನಮಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. 2047ರ ವೇಳೆಗೆ ಈ ಗುರಿ ಸಾಧಿಸುವುದಾಗಿ ನಾವು ಸರ್ಕಾರಕ್ಕೆ ಭರವಸೆ ನೀಡಿದ್ದು ಈ ದಿಸೆಯಲ್ಲಿ ಹಿಂದಿನ ಒಂದು ವರ್ಷದಲ್ಲಿ ಹಲವು ಕೆಲಸಗಳನ್ನು ಮಾಡಿದ್ದೇವೆ. ಯುದ್ಧವಿಮಾನ
ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ನಿರ್ಮಾಣ ಮಾಡಿರುವುದು ಮಹತ್ವದ ಹೆಜ್ಜೆಯಾಗಿದೆ’
ಎಂದಿದ್ದಾರೆ.

‘ಅಮೆರಿಕದಿಂದ ‘ಪ್ರಿಡೇಟರ್’ ಡ್ರೋನ್ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟು30 ಶಸ್ತ್ರಸಜ್ಜಿತ ಎಂಕ್ಯೂ–9ಬಿ ಪ್ರಿಡೇಟರ್ ಡ್ರೋನ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ₹24,426 ಕೋಟಿಗೂ ಅಧಿಕ ಮೊತ್ತ ತಗುಲಲಿದೆ. ಚೀನಾಕ್ಕೆ ಹೊಂದಿಕೊಂಡಂತಿರುವ ಗಡಿ ಹಾಗೂ ಹಿಂದೂ ಮಹಾಸಾಗರ ಪ್ರದೇಶದ ಮೇಲೆ ಕಣ್ಗಾವಲು ಇಡುವುದಕ್ಕೆ ಈ ಡ್ರೋನ್‌ಗಳು ಸಹಕಾರಿಯಾಗಿವೆ’ ಎಂದು ಹೇಳಿದ್ದಾರೆ.

ಎಂಕ್ಯೂ–9ಬಿ ಡ್ರೋನ್, ಎಂಕ್ಯೂ–9 ರೀಪರ್ ಡ್ರೋನ್‌ನ ರೂಪಾಂತರಿಯಾಗಿದೆ. ಕರಾವಳಿ ಪ್ರದೇಶದ ಮೇಲೆ ಕಣ್ಗಾವಲು ಇಡುವ ಉದ್ದೇಶದಿಂದ ಭಾರತವು 2020ರಲ್ಲಿ ಒಂದು ವರ್ಷದ ಅವಧಿಗೆ ಎರಡು ಎಂಕ್ಯೂ–9ಬಿ ಡ್ರೋನ್‌ಗಳನ್ನು ಪಡೆದಿತ್ತು. ಈ ಡ್ರೋನ್‌ಗಳ ಗುತ್ತಿಗೆ ಅವಧಿಯನ್ನೂ ನೌಕಾಪಡೆ ವಿಸ್ತರಿಸಿದೆ.

‘ಸದ್ಯ ನೌಕಾಪಡೆಯ 7 ರಿಂದ 8 ಶಾಖೆಗಳಲ್ಲಷ್ಟೇ ಮಹಿಳಾ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷದಿಂದ ಎಲ್ಲಾ ವಿಭಾಗಗಳಲ್ಲೂ ಮಹಿಳಾ ಅಧಿಕಾರಿಗಳನ್ನು ನೇಮಕಮಾಡಿಕೊಳ್ಳುವ ಆಲೋಚನೆ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.