ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನಿನ ಜೊತೆ ಸಂಘರ್ಷಕ್ಕೆ ಸಿಲುಕಿರುವ ಬಾಲಕನ ತಾಯಿ ಶಿವಾನಿ ಅಗರ್ವಾಲ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕನ ರಕ್ತದ ಮಾದರಿಯನ್ನು ಬದಲಿಸಿ, ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಲಾಗಿತ್ತು ಎಂಬುದು ಖಚಿತವಾದ ನಂತರ ಈ ಬಂಧನ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ನಿರೀಕ್ಷಣಾ ಗೃಹದಲ್ಲಿ ಇರುವ ಬಾಲಕನ ಜೊತೆ, ಆತನ ತಾಯಿಯ ಉಪಸ್ಥಿತಿಯಲ್ಲಿ, ಸರಿಸುಮಾರು ಒಂದು ಗಂಟೆ ಮಾತನಾಡಿದರು.

ಬಾಲಕನನ್ನು ವಿಚಾರಣೆಗೆ ಗುರಿಪಡಿಸಲು ಬಾಲನ್ಯಾಯ ಮಂಡಳಿಯು (ಜೆಜೆಬಿ) ಪೊಲೀಸರಿಗೆ ಅನುಮತಿ ನೀಡಿದೆ. ಬಾಲನ್ಯಾಯ ಕಾಯ್ದೆಯ ಪ್ರಕಾರ, ಕಾನೂನಿನ ಜೊತೆ ಸಂಘರ್ಷಕ್ಕೆ ಗುರಿಯಾದ ಮಕ್ಕಳ ವಿಚಾರಣೆಯನ್ನು ಅವರ ಪಾಲಕರ ಸಮ್ಮುಖದಲ್ಲಿ ನಡೆಸಬೇಕು.
.ಪೋಶೆ ಕಾರು ಅಪಘಾತ ಪ್ರಕರಣ: ಬಾಲಕನ ರಕ್ತದ ಬದಲಿಗೆ ಇರಿಸಿದ್ದು ಮಹಿಳೆಯೊಬ್ಬರ ರಕ್ತ.ಪೋಶೆ ಕಾರು ದುರಂತ | ಬಾಲಕನ ತಾಯಿಯ ರಕ್ತದ ಮಾದರಿ ಬಳಕೆ: ವೈದ್ಯರು ಸೇರಿ ಮೂವರ ಬಂಧನ.ಪೋಶೆ ಅಪಘಾತ: ಬಾಲಕನ ತಂದೆ, ತಾತ 31ರವರೆಗೆ ಪೊಲೀಸರ ವಶಕ್ಕೆ.ಪೋಶೆ ಅಪಘಾತ | ಬಾಲಕ ಕಾರು ಚಲಾಯಿಸುತ್ತಿರಲಿಲ್ಲ ಎಂದು ಬಿಂಬಿಸುವ ಯತ್ನ: ಪೊಲೀಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.