ಕೆವಾಡಿಯಾ: ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.ಮೂರು ದಿನಗಳ ಭೇಟಿ ಸಲುವಾಗಿ ಗುಜರಾತ್ಗೆ ಆಗಮಿಸಿರುವ ಸಿಂಗ್, ರಫೇಲ್ ಖರೀದಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ.

ʼಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಸಮಸ್ಯೆ ಸೃಷ್ಟಿಸಿದ್ದರು. ರಾಹುಲ್ ಇನ್ನೂ ಟೇಕಾಫ್ ಆಗಿಲ್ಲ (ಹಾರಾಟ ಆರಂಭಿಸಿಲ್ಲ). ಇದೇವೇಳೆ ಈ ವಿಮಾನಗಳು ಈಗ ಭಾರತದಲ್ಲಿ ಇಳಿದಿವೆʼ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಉಂಟಾದ ಗದ್ದಲಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಗ್,ವಿರೋಧ ಪಕ್ಷಗಳು ವಿರೋಧಿಸಲೇಬೇಕುಎಂದು ಮುಂದುವರಿದಿದ್ದರಿಂದ ಸಂಸತ್ ಅಧಿವೇಶನಕ್ಕೆ ಅಡ್ಡಿಯಾಯಿತು. ವಿರೋಧ ಪಕ್ಷಗಳು ಮಿತಿಮೀರಿದಾಗ ವಿರೋಧವನ್ನು ಶಮನ ಮಾಡಲು ನಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಬೇಕಾಗುತ್ತದೆʼ ಎಂದಿದ್ದಾರೆ.

ಸ್ವಯಂ ಪ್ರಚಾರದಲ್ಲಿ ನಿರತವಾಗಿರುವ ಕಾಂಗ್ರೆಸ್ ಜನರ ಕಲ್ಯಾಣವನ್ನು ಮರೆತಿದೆ ಮತ್ತು ಮಹಾತ್ಮಾ ಗಾಂಧಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಕಿಡಿಕಾರಿದ್ದಾರೆ.

ಇದನ್ನೂ ಓದಿ:ವ್ಯರ್ಥವಾದ ಮುಂಗಾರು ಅಧಿವೇಶನ ಸಂಸದೀಯ ಪ್ರಜಾಸತ್ತೆಯ ದಮನ

ʼಕಾಂಗ್ರೆಸ್ ʼಗಾಂಧಿʼ ಉಪನಾಮವನ್ನು ಗರಿಷ್ಠ ಮಟ್ಟದಲ್ಲಿಬಳಸಿಕೊಂಡಿದೆ. ಎಷ್ಟರಮಟ್ಟಿಗೆ ಎಂದರೆ ʼಗಾಂಧಿʼಯನ್ನು ತಮ್ಮಸ್ವಂತ ಉಪನಾಮವೆಂಬಂತೆ ಉಪಯೋಗಿಸಿಕೊಳ್ಳುತ್ತಿದೆ. ಮಹಾತ್ಮ ಗಾಂಧಿಯವರು ಅವರಿಗೆ ನೀಡಿದ ಕೆಲಸಗಳನ್ನು ಮಾಡಲು ಮರೆತಿದ್ದಾರೆ. ಕಾಂಗ್ರೆಸ್ಸಿಗರು ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಲು ನಿರತರಾಗಿದ್ದಾರೆ. ಅವರು ಭ್ರಷ್ಟಾಚಾರವನ್ನುಸಾಂಸ್ಥೀಕರಣಗೊಳಿಸಿದ್ದಾರೆʼ ಎಂದು ಆರೋಪಿಸಿದ್ದಾರೆ.

ಪಾರದರ್ಶಕತೆ ಕುರಿತಾಗಿನರೇಂದ್ರ ಮೋದಿ ಮತ್ತು ರಾಜೀವ್ ಗಾಂಧಿ ಆಡಳಿತವನ್ನು ಹೋಲಿಕೆ ಮಾಡಿರುವ ರಕ್ಷಣಾ ಸಚಿವ, ʼಈಮೊದಲು 100 ಪೈಸೆಗಳಲ್ಲಿ ಕೇವಲ 16 ಪೈಸೆ ಮಾತ್ರವೇ ಫಲಾನುಭವಿಗಳನ್ನು ತಲುಪುತ್ತಿದೆ ಎಂಬ ದೂರುಗಳು ಇದ್ದವು. ಆದರೆ, ಈಗ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುತ್ತಿದೆʼ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.