ನವದೆಹಲಿ: ಕಾಂಗ್ರೆಸ್ ನಡೆಸುತ್ತಿರುವ ಕ್ರೌಡ್ಫಂಡಿಂಗ್ ‘ದೇಶಕ್ಕಾಗಿ ದೇಣಿಗೆ’ ಅಭಿಯಾನದಲ್ಲಿ ಪಾಲ್ಗೊಂಡ ಪಕ್ಷದ ನಾಯಕ ರಾಹುಲ್ ಗಾಂಧಿ ದೇಣಿಗೆ ನೀಡಿದ್ದಾರೆ. ಇದು ಸಾಮರಸ್ಯ ಮತ್ತು ಪ್ರಗತಿಪರ ಭಾರತಕ್ಕೆ ತಮ್ಮ ಕೊಡುಗೆ ಎಂದು ಅವರು ಹೇಳಿದರು.

‘ನೀವೆಲ್ಲರೂ ದೇಣಿಗೆ ನೀಡುವ ಮೂಲಕ ಆಂದೋಲನದ ಭಾಗವಾಗಬೇಕೆಂದು ನಾನು ಮನವಿ ಮಾಡುತ್ತೇನೆ' ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ 'ದೇಶಕ್ಕಾಗಿ ದೇಣಿಗೆ' ಅಭಿಯಾನಕ್ಕೆ ಕೊಡುಗೆ ನೀಡುತ್ತಿರುವ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಆದರೆ ತಾವು ನೀಡಿದ ದೇಣಿಗೆ ಮೊತ್ತವನ್ನು ಅವರು ಬಹಿರಂಗಪಡಿಸಿಲ್ಲ.

ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ? ಎಂದು ರಾಹುಲ್ ಗಾಂಧಿ ಪಕ್ಷದ ಖಜಾಂಚಿ ಅಜಯ್ ಮಾಕನ್ ಅವರನ್ನು ಕೇಳಿದರು. ಪಕ್ಷ ಇನ್ನೂ ಯಾವುದೇ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಿಲ್ಲ. ಆದರೆ ಇದು ನಿರೀಕ್ಷೆಗಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಬಹುದು ಎಂದು ಮಾಕೆನ್ ಭರವಸೆ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಇಲ್ಲಿಯವರೆಗೆ ಹೆಚ್ಚಿನ ದೇಣಿಗೆಯನ್ನು ನೀಡಿದೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿದೆ ಎಂದು ಮಾಕೆನ್ ವಿವರಿಸಿದರು.

2024ರ ಲೋಕಸಭೆ ಚುನಾವಣೆಗೂ ಮುನ್ನ ಸಂಪನ್ಮೂಲವನ್ನು ಕ್ರೋಡೀಕರಿಸಲು ಕಾಂಗ್ರೆಸ್ ದೇಶದಾದ್ಯಂತ 'ದೇಶಕ್ಕಾಗಿ ದೇಣಿಗೆ' ಕ್ರೌಡ್ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದೆ. ಡಿಸೆಂಬರ್ 18 ರಂದು ಮಲ್ಲಿಕಾರ್ಜುನ ಖರ್ಗೆ ದೇಣಿಗೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
.ಡಿ.18ಕ್ಕೆ ‘ದೇಶಕ್ಕಾಗಿ ದೇಣಿಗೆ ನೀಡಿ’ ಆಂದೋಲನಕ್ಕೆ ಕಾಂಗ್ರೆಸ್ ಚಾಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.