ಕಲ್ಪಟ್ಟ: ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ನಡೆಸಿದ ರೋಡ್ ಶೋ ವೇಳೆ ನೂಕು ನುಗ್ಗಲು ಉಂಟಾಗಿ ಮೂವರು ಪತ್ರಕರ್ತರಿಗೆ ಗಾಯಗಳಾಗಿವೆ.ಮಲಯಾಳ ಮನೋರಮಾ ಫೋಟೊಗ್ರಾಫರ್ ಆರ್.ಎಸ್.ಗೋಪನ್, ಎಎನ್‍ಐ ಸುದ್ದಿಸಂಸ್ಥೆಯ ಪತ್ರಕರ್ತ ಮತ್ತು ಸುದ್ದಿ ವಾಹಿನಿಯೊಂದರ ಪತ್ರಕರ್ತರಿಗೆ ಗಾಯವಾಗಿದೆ.
ಘಟನೆ ಅರಿತು ಅಲ್ಲಿಗೆಧಾವಿಸಿದರಾಹುಲ್ ಮತ್ತು ಪ್ರಿಯಾಂಕಾ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗಿದ್ದಾರೆ.

ರೋಡ್ ಶೋ ದೃಶ್ಯಗಳನ್ನು ಸೆರೆ ಹಿಡಿಯಲು ಟ್ರಕ್‍ನಲ್ಲಿ ಸಂಚರಿಸುತ್ತಿದ್ದ ವೇಳೆ ಬ್ಯಾರಿಕೇಡ್ ಮುರಿದು ಬಿದ್ದು ಪತ್ರಕರ್ತರಿಗೆ ಗಾಯಗಳಾಗಿವೆ ಎಂದು ಮನೋರಮಾ ಆನ್‍ಲೈನ್ ಡಾಟ್ ಕಾಮ್ ವರದಿ ಮಾಡಿದೆ.ರೋಡ್ ಶೋ ಮುಗಿಯುವುದಕ್ಕಿಂತ ಸ್ವಲ್ಪ ಮುನ್ನ ಈ ಘಟನೆ ಸಂಭವಿಸಿದೆ.ತಕ್ಷಣವೇ ಹತ್ತಿರದ ವಾಹನದಲ್ಲಿ ಸಂಚರಿಸುತ್ತಿದ್ದ ರಾಹುಲ್ ಮತ್ತು ಪ್ರಿಯಾಂಕಾ ಗಾಯಾಳುಗಳ ಬಳಿಗೆ ಬಂದು ಅವರಿಗೆ ಕುಡಿಯಲು ನೀರು ನೀಡಿದ್ದಾರೆ.ಆಮೇಲೆಈ ಪತ್ರಕರ್ತರನ್ನು ಆ್ಯಂಬುಲೆನ್ಸ್ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗಾಯಗೊಂಡ ಪತ್ರಕರ್ತರೊಬ್ಬರನ್ನು ಸ್ಟ್ರೆಚರ್ ಬಳಸಿ ಆ್ಯಂಬುಲೆನ್ಸ್ ಬಳಿ ಕರೆದೊಯ್ಯುವಾಗಲೂ ರಾಹುಲ್ ಸಹಾಯ ಮಾಡಿದ್ದಾರೆ.ಪ್ರಿಯಾಂಕಾ ಪತ್ರಕರ್ತನ ಶೂ ಕೈಯಲ್ಲಿ ಹಿಡಿದು ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.ಯುವ ಕಾಂಗ್ರೆಸ್ ನೇತಾರ ವಿ.ಎಸ್. ಜೋಯ್ ಈ ವಿಡಿಯೊ ಸೆರೆ ಹಿಡಿದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ಗುರುವಾರ ಬೆಳಗ್ಗೆ 11.02ಕ್ಕೆ ಕಲ್ಪಟ್ಟ ಎಸ್.ಕೆ.ಎಂ.ಜೆ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ರಾಹುಲ್ ಅಲ್ಲಿಂದ ರೋಡ್ ಶೋ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿನಾಮ ಪತ್ರಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.