ಕೋಯಿಕ್ಕೋಡ್(ಕೇರಳ): ಹಿಂದಿಯೇತರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ತಲೆದೋರುವ ಭಾಷಾಂತರದ ಅವಾಂತರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿ ಹಾಸ್ಯದ ಮೂಲಕ ಹೇಳಿದ್ದಾರೆ. ತೆಲಂಗಾಣದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿರುವ ಅವರು, ‘ನನ್ನ ಅನುವಾದಕರಾಗಿರುವುದು ಅತ್ಯಂತ ಅಪಾಯದ ಕೆಲಸ’ ಎಂದಿದ್ದಾರೆ.

ಕೋಯಿಕ್ಕೊಡ್ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಭಾಷಾಂತರವು ಹೇಗೆ ಸಮಸ್ಯೆಯಾಗಿ ಪರಿಣಮಿಸಿತ್ತು ಎಂಬುವುದನ್ನು ಪ್ರಸ್ತಾಪಿಸಿದ್ದಾರೆ.

‘ತೆಲಂಗಾಣ ಚುನಾವಣೆ ಪ್ರಚಾರದ ವೇಳೆ ನಾನು ಏನೋ ಹೇಳಿದರೆ ಅವರು(ತೆಲುಗು ಭಾಷಾಂತರಗಾರ) ಇನ್ನೇನೋ ಹೇಳುತ್ತಿದ್ದರು. ಈ ಬಗ್ಗೆ ಅನುಮಾನ ಬಂದ ನಾನು ಪದಗಳನ್ನು ಲೆಕ್ಕ ಇಡಲು ಶುರು ಮಾಡಿದೆ. ಹಿಂದಿಯಲ್ಲಿ ಐದು ಪದಗಳಲ್ಲಿ ಹೇಳಿದ ಒಂದು ವಾಕ್ಯ ತೆಲುಗಿನಲ್ಲಿ ಐದರಿಂದ ಏಳು ಪದಗಳಲ್ಲಿ ಮುಗಿಯುತ್ತದೆ ಎಂದು ನನ್ನ ಭಾವನೆ. ಆದರೆ ಅಲ್ಲಿ ಹಾಗಾಗುತ್ತಿರಲಿಲ್ಲ. ಐದು ಪದಗಳಲ್ಲಿರುವ ನನ್ನ ಒಂದು ವಾಕ್ಯವನ್ನು ಇಪ್ಪತ್ತರಿಂದ ಮೂವತ್ತು ಪದಗಳಲ್ಲಿ ಹೇಳುತ್ತಿದ್ದರು’ ಎಂದು ನಕ್ಕರು.

‘ಕೆಲವೊಮ್ಮೆ ತುಂಬಾ ನೀರಸವಾಗಿರುವುದನ್ನೆನಾದರೂ ಹೇಳಿದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ರೋಮಾಂಚನಕಾರಿಯಾಗಿರುವುದನ್ನು ಹೇಳಿದರೆ ನೀರಸ ಪ್ರತಿಕ್ರಿಯೆ ನೀಡುತ್ತಾರೆ. ಇದು ನನಗೆ ಕೋಪ ತರಿಸುವ ಬದಲು ನಗು ತರಿಸುತ್ತದೆ’ ಎಂದರು.

ಪುಸ್ತಕ ಬಿಡುಗಡೆ ಸಂದರ್ಭ ರಾಹುಲ್ ಗಾಂಧಿಯವರ ಮಾತನ್ನು ಸಂಸದ ಅಬ್ದುಸ್ಸಮದ್ ಸಮದಾನಿ ಭಾಷಾಂತರ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.