ಜಮ್‌ಶೆಡ್‌ಪುರ/ಪುರುಲಿಯಾ/ವಿಷ್ಣುಪುರ (ಜಾರ್ಖಂಡ್): ಕಾಂಗ್ರೆಸ್ ‘ಶಹಜಾದ’ (ರಾಹುಲ್ ಗಾಂಧಿ) ಮಾವೋವಾದಿ ಭಾಷೆ ಬಳಸುತ್ತಿದ್ದು, ಅದರಿಂದಾಗಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಹೂಡಿಕೆ ಮಾಡಬೇಕು ಎಂದರೆ ಉದ್ಯಮಿಗಳು 50 ಬಾರಿ ಯೋಚಿಸುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿಪ್ರಾಯಪಟ್ಟರು.

ಇಲ್ಲಿ ನಡೆದ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಅತ್ಯಂತ ಹಳೆಯ ಪಕ್ಷವು ಕುಟುಂಬ ರಾಜಕಾರಣವನ್ನು ಪೋಷಿಸುತ್ತಿದ್ದು, ಲೋಕಸಭಾ ಸ್ಥಾನಗಳನ್ನು ತಮ್ಮ ‘ಪೂರ್ವಜರ ಸ್ವತ್ತು’ ಎಂಬುದಾಗಿ ಭಾವಿಸುತ್ತಿದೆ’ ಎಂದು ಟೀಕಿಸಿದರು.

‘ಶಹಜಾದ’ ಮಾವೋವಾದಿಗಳು ಬಳಸುವ ಭಾಷೆ ಮಾತನಾಡುತ್ತಿದ್ದು, ನವೀನ ಮಾರ್ಗಗಳ ಮೂಲಕ ಹಣ ಸುಲಿಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ತಮ್ಮ ‘ಶಹಜಾದ’ನ ಉದ್ಯಮ ವಿರೋಧಿ, ಉದ್ದಿಮೆದಾರ ವಿರೋಧಿ ಭಾಷೆಯನ್ನು ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪುವರೇ’ ಎಂದು ಪ್ರಶ್ನಿಸಿದರು.

ರಾಹುಲ್ ಅವರು ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದನ್ನು ಲೇವಡಿ ಮಾಡಿದ ಪ್ರಧಾನಿ, ‘ಶಹಜಾದ’ ಕ್ಷೇತ್ರಕ್ಕೆ ಧಾವಿಸಿ, ಇದು ನಮ್ಮ ಅಮ್ಮನ ಕ್ಷೇತ್ರ ಎಂದಿದ್ದಾರೆ. ಎಂಟು ವರ್ಷದ ಶಾಲಾ ಬಾಲಕ ಕೂಡ ಹಾಗೆ ಹೇಳುವುದಿಲ್ಲ’ ಎಂದರು.

‘ತನ್ನ ಮಗನನ್ನು ರಾಯ್‌ಬರೇಲಿಗೆ ಬಿಟ್ಟುಕೊಟ್ಟಿದ್ದೇನೆ ಎಂದು ಅವರ ತಾಯಿ (ಸೋನಿಯಾ) ಹೇಳಿದ್ದಾರೆ. ತಮ್ಮ ಬಗ್ಗೆ ನಿಷ್ಠೆಯುಳ್ಳ ಒಬ್ಬನೇ ಒಬ್ಬ ಕಾರ್ಯಕರ್ತನೂ ಅವರಿಗೆ ಸಿಕ್ಕಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ನೀವು ಎಲ್ಲಿದ್ದೀರಿ ಎಂದು ರಾಯ್‌ಬರೇಲಿಯ ಜನ ಅವರನ್ನು ಕೇಳಬೇಕಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಜೆಎಂಎಂ ಭ್ರಷ್ಟ ಪಕ್ಷಗಳು ಎಂದು ಆರೋಪಿಸಿದ ಪ್ರಧಾನಿ, ‘ಭ್ರಷ್ಟಾಚಾರ ಮಾಡಿದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ’ ಎಂದು ತಿಳಿಸಿದರು.

ಪ್ರಧಾನಿ ಹೇಳಿದ್ದು.....

ಇಸ್ಕಾನ್ ರಾಮಕೃಷ್ಣ ಮಿಷನ್ ಭಾರತ ಸೇವಾಶ್ರಮ ಸಂಸ್ಥೆಗಳು ತಮ್ಮ ಸೇವೆ ಮತ್ತು ನೈತಿಕತೆಗೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಅವರು ತಮ್ಮ ಮತ ಬ್ಯಾಂಕ್ ಅನ್ನು ಓಲೈಕೆ ಮಾಡಲು ಈ ಸಂಸ್ಥೆಗಳಿಗೆ ಬಹಿರಂಗವಾಗಿ ಬೆದರಿಕೆ ಒಡ್ಡಿದ್ದಾರೆ.

ಮಮತಾ ಬ್ಯಾನರ್ಜಿ ಮುಸ್ಲಿಂ ಮೂಲಭೂತವಾದಿಗಳಿಂದ ಒತ್ತಡಕ್ಕೊಳಗಾಗಿ ದೇಶದ ಸಂತರು ಸನ್ಯಾಸಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ.

ಮೋದಿ 52 ಕೋಟಿ ಜನರಿಗೆ ಜನ್‌ಧನ್ ಖಾತೆ ಮಾಡಿಸಿದರು 4 ಕೋಟಿ ಜನರಿಗೆ ಪಕ್ಕಾ ಮನೆಗಳನ್ನು ನೀಡಿದರು 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನಲ್ಲಿ ನೀರು ಆಧುನಿಕ ರೈಲ್ವೆ ಹೆಚ್ಚಿನ ಮೂಲಸೌಕರ್ಯ ಒದಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.