ನವದೆಹಲಿ: ರೈಲು ಅಪಘಾತಗಳ ತಡೆಗೆ ಸ್ವಯಂಚಾಲಿತ ರೈಲು ಭದ್ರತೆ(ಎಟಿಪಿ) ವ್ಯವಸ್ಥೆ ‘ಕವಚ್’ ಅಳವಡಿಕೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ₹1,112 ಕೋಟಿಯನ್ನು ರೈಲ್ವೆ ಸಚಿವಾಲಯ ವಿನಿಯೋಗಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ರೈಲ್ವೆಗೆ ನೀಡಿರುವ ಅನುದಾನ ಮತ್ತು ಕವಚ್ ವ್ಯವಸ್ಥೆ ಅಳವಡಿಸಲು ಮಾಡಲಾದ ಹಣದ ವಿನಿಯೋಗದ ಬಗ್ಗೆ ಪೂರ್ಣ ವಿವರ ನೀಡುವಂತೆ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಮತ್ತು ರಾಣಿ ಶ್ರೀಕುಮಾರ್ ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಗೆ ವೈಷ್ಣವ್ ಪ್ರತಿಕ್ರಿಯಿಸಿದ್ದಾರೆ.

‘ಈವರೆಗೆ ‘ಕವಚ್’ ವ್ಯವಸ್ಥೆಗೆ ₹1,216.77 ಕೋಟಿ ವಿನಿಯೋಗಿಸಲಾಗಿದ್ದು, 2024–25ರ ಹಣಕಾಸು ವರ್ಷದಲ್ಲಿ ₹1,112.57 ಕೋಟಿ ನಿಗದಿಪಡಿಸಲಾಗಿದೆ’ಎಂದು ತಿಳಿಸಿದರು.

ಸ್ವದೇಶಿ ನಿರ್ಮಿತ ‘ಕವಚ್’ ಎಂದರೆ ಸ್ವಯಂಚಾಲಿತ ರೈಲು ಭದ್ರತೆ(ಎಟಿಪಿ) ವ್ಯವಸ್ಥೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

‘ಒಂದೊಮ್ಮೆ ಲೋಕೊ ಪೈಲಟ್ ರೈಲನ್ನು ನಿಯಂತ್ರಿಸುವಲ್ಲಿ ವಿಫಲವಾದರೆ ‘ಕವಚ್’, ಸ್ವಯಂಚಾಲಿತ ವ್ಯವಸ್ಥೆ ಮೂಲಕ ಬ್ರೇಕ್ ಹಾಕಿ ರೈಲಿನ ವೇಗವನ್ನು ನಿಯಂತ್ರಿಸುತ್ತದೆ. ಪ್ರತಿಕೂಲ ಹವಾಮಾನದ ಸಂದರ್ಭ ರೈಲು ಸುರಕ್ಷಿತವಾಗಿ ಚಲಿಸಲು ನೆರವಾಗುತ್ತದೆ’ಎಂದು ಅವರು ಹೇಳಿದ್ದಾರೆ.

‘‘ಕವಚ್’ ಸ್ಥಾಪನಾ ಕೆಲಸವು ಹಲವು ಹಂತದ ಪ್ರಕ್ರಿಯೆ ಹೊಂದಿದೆ. ಮೊದಲಿಗೆ ಪ್ರತಿಯೊಂದು ರೈಲು ನಿಲ್ದಾಣದಲ್ಲಿ ‘ಸ್ಟೇಷನ್ ಕವಚ್’ ಸ್ಥಾಪಿಸಬೇಕು. ಹಳಿಯುದ್ದಕ್ಕೂ ಆರ್ಎಫ್ಐಡಿ ಟ್ಯಾಗ್ ಅಳವಡಿಸಬೇಕು. ಎಲ್ಲ ವಿಭಾಗಗಳಲ್ಲಿ ಟೆಲಿಕಾಂ ಟವರ್ ಅಳವಡಿಸಬೇಕು ಮತ್ತು ಹಳಿಗಳ ಪಕ್ಕದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಹಾಕಬೇಕು’ ಎಂದಿದ್ದಾರೆ.

ಈವರೆಗೆ ದೇಶದ 1,465 ಕಿ.ಮೀ ರೈಲು ಮಾರ್ಗದಲ್ಲಿ ‘ಕವಚ್’ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಇತ್ತೀಚೆಗೆ, ಒಡಿಶಾದ ಬಾಲೇಶ್ವರದಲ್ಲಿ ಸಂಭವಿಸಿದ ರೈಲು ಅಪಘಾತದ ಬಳಿಕ ಕವಚ್ ವ್ಯವಸ್ಥೆ ಕುರಿತಂತೆ ಭಾರಿ ಚರ್ಚೆ ನಡೆಯುತ್ತಿದೆ.
.ಪಿಎಂಒ ಕುಂದುಕೊರತೆ ಪೋರ್ಟಲ್ನಲ್ಲಿ ದಾಖಲಾದ 12,000ಕ್ಕೂ ದೂರು ಬಾಕಿ: ಕೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.