ಜೈಪುರ: ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ಗೆ ಭೇಟಿ ನೀಡಿದ ವೇಳೆ ಉಂಟಾದ ಭದ್ರತಾ ಗಂಭೀರ ಲೋಪದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ನಿಯೋಗವು ಶನಿವಾರ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ನಿವೇದನೆಯನ್ನು ಸಲ್ಲಿಸಿದೆ.

ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ನೇತೃತ್ವದ ನಿಯೋಗದಲ್ಲಿ ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್, ಜೈಪುರ ಸಂಸದ ರಾಮಚರಣ್ ಬೋಹ್ರಾ ಮತ್ತು ಶಾಸಕರಾದ ರಾಮಲಾಲ್ ಶರ್ಮಾ ಮತ್ತು ಅಶೋಕ್ ಲಹೋಟಿ ಇದ್ದರು.

'ಗುಲಾಬ್ ಚಂದ್ ಕಟಾರಿಯಾ ನೇತೃತ್ವದ 6 ಸದಸ್ಯರನ್ನೊಳಗೊಂಡ ಬಿಜೆಪಿ ನಿಯೋಗವು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಪಂಜಾಬ್ ಸರ್ಕಾರ ಮಾಡಿರುವ ಗಂಭೀರ ಲೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು' ಎಂದು ರಾಜಭವನ ಟ್ವೀಟ್ ಮೂಲಕ ತಿಳಿಸಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಸಂಚು: ಪಂಜಾಬ್ ಸರ್ಕಾರದ ವಿರುದ್ಧ ಕಿರಣ್ ಬೇಡಿ ಕಿಡಿ

ಪಕ್ಷವು ಲೋಪದೋಷದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಇನ್ನಷ್ಟು...

ಡ್ರೋಣ್, ಟೆಲಿಸ್ಕೋಪಿಕ್ ಬಂದೂಕಿನಿಂದ ಮೋದಿ ಹತ್ಯೆಯಾಗುವ ಸಾಧ್ಯತೆ ಇತ್ತು: ಸಚಿವ

ಸಮನ್ವಯ ಕೊರತೆಯಿಂದ ಭದ್ರತಾ ಲೋಪ: ಪರಿಣತರ ಅಭಿಪ್ರಾಯ

ಭದ್ರತಾ ಲೋಪ: ಪಂಜಾಬ್ ಸರ್ಕಾರದಿಂದ ಎಫ್ಐಆರ್– ಫಿರೋಜ್ಪುರದಲ್ಲಿ ಕೇಂದ್ರ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.