ಜೈಪುರ: ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರಗಳನ್ನು ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹೇಳಿದ್ದಾರೆ.

ಉದಯಪುರದಲ್ಲಿ ನಡೆದ ‘ವಿಕಸಿತ ಭಾರತ ಸಂಕಲ್ಪ ಭಾರತ’ ಶಿಬಿರದಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರದಲ್ಲಿ ತೊಡಗಿದ್ದವರಿಗೆ ಹಿಂದಿನ ಸರ್ಕಾರ ರಕ್ಷಣೆ ನೀಡಿತ್ತು. ಅವರು ಮಾಡಿದ ಭ್ರಷ್ಟಾಚಾರ ಅಥವಾ ಅವರಿಂದ ಆದ ಭ್ರಷ್ಟಾಚಾರವನ್ನು ನಾವು ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರಿಗೆ ನಮ್ಮ ಸರ್ಕಾರ ಶಿಕ್ಷೆ ನೀಡಲಿದೆ’ ಎಂದಿದ್ದಾರೆ.
.ರಾಜಸ್ಥಾನ | ಕಾಂಗ್ರೆಸ್ ಅಭ್ಯರ್ಥಿ ಗೆಲುವು; ಬಿಜೆಪಿಗೆ ಮುಜುಗರ.
‘ಇಂದಿರಾ ರಸೋಯಿ ಯೋಜನೆಯಲ್ಲಿ ನಡೆಯುತ್ತಿದ್ದ ಮೋಸವನ್ನು ನಿಲ್ಲಿಸಿ, ಶ್ರೀ ಅನ್ನ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಹಿಂದೆ ಆ ಯೋಜನೆಯಡಿ ಒಬ್ಬರಿಗೆ 450 ಗ್ರಾಂ ಧಾನ್ಯಗಳನ್ನು ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಅದೇ ದರಕ್ಕೆ ಅದನ್ನು 600 ಗ್ರಾಂಗೆ ಹೆಚ್ಚಿಸಿದೆ’ ಎಂದು ಹೇಳಿದ್ದಾರೆ.

‘ಈ ಹಿಂದೆ ವಸುಂಧರಾ ರಾಜೆ ಅವರ ಸರ್ಕಾರ ಇದ್ದಾಗ ಅನ್ನಪೂರ್ಣ ರಸೋಯಿ ಯೋಜನೆ ಜಾರಿಗೆ ತಂದಿತ್ತು. ಜನ ಸಾಮಾನ್ಯರಿಗೆ ಉಪಯೋಗವಾಗಲೆಂದು ಆಸ್ಪತ್ರೆ, ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಕ್ಯಾಂಟೀನ್ ಸ್ಥಾಪಿಸಿದ್ದರು. ಆ ಬಳಿಕ ಬಂದ ಸರ್ಕಾರ ಅದಕ್ಕೆ ಇಂದಿರಾ ರಸೋಯಿ ಎಂದು ಮರುನಾಮಕರಣ ಮಾಡಿ, ಬೋಗಸ್ ಪಾವತಿಗಳನ್ನು ಮಾಡಿತ್ತು’ ಎಂದು ಆರೋಪಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ ಎಂದ ಅವರು, ಪ್ರತಿದಿನವೂ ಪ್ರಕರಣದಲ್ಲಿ ಭಾಗಿಯಾದವರ ಬಂಧನವಾಗುತ್ತಿದೆ. ಯುವಕರ ಭವಿಷ್ಯವನ್ನು ಹಾಳು ಮಾಡಿದವರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
.ರಾಜಸ್ಥಾನ: 72 ಐಎಎಸ್; 121 ರಾಜ್ಯ ಆಡಳಿತ ಸೇವೆ ಅಧಿಕಾರಿಗಳ ವರ್ಗಾವಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.