ಜೈಪುರ: ರಾಜಸ್ಥಾನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ಯಾಂಗ್‌ಸ್ಟರ್ ವಿರೋಧಿ ಕ್ರಿಯಾಪಡೆ ನಡೆಸಿರುವ ತನ್ನ ಮೊದಲ ಕಾರ್ಯಾಚರಣೆಯಲ್ಲಿ ಹಲವು ಕೊಲೆ ಪ್ರಕರಣಗಳ ಆರೋಪಿ ಬಿಟ್ಟು ಅಲಿಯಾಸ್ ದಿಗ್ವಿಜಯ್ ಸಿಂಗ್‌ನನ್ನು ಬಂಧಿಸಲಾಗಿದೆ.

ಎರಡು ಕೊಲೆ ಪ್ರಕರಣಗಳು ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಈತನ ಬಂದನಕ್ಕಾಗಿ ಕಳೆದ ಐದು ವರ್ಷಗಳಿಂದ ಪೊಲೀಸರು ಬಲೆ ಬೀಸಿದ್ದರು. ಬಿಟ್ಟು ಕುರಿತು ಮಾಹಿತಿ ನೀಡಿದವರಿಗೆ ₹50 ಸಾವಿರ ನಗದು ಬಹುಮಾನವನ್ನೂ ಘೋಷಿಸಲಾಗಿತ್ತು.

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಭಜನ್ ಲಾಲ್ ಶರ್ಮಾ ಅವರು ಇತ್ತೀಚೆಗೆ ನೂತನ ಕಾರ್ಯಪಡೆಯನ್ನು ರಚಿಸಿ, ಅದರ ಮುಖ್ಯಸ್ಥರನ್ನಾಗಿ ಎಡಿಜಿಪಿ ಎಂ.ಎನ್.ದಿನೇಶ್ ಅವರನ್ನು ನೇಮಿಸಿದ್ದರು.

ಈತನ ಬಂಧನಕ್ಕಾಗಿ ಎಎಸ್‌ಪಿ ವಿದ್ಯಾ ಪ್ರಕಾಶ್ ಹಾಗೂ ಇನ್‌ಸ್ಪೆಕ್ಟರ್ ಪ್ರಫುಲ್ಲ ಕುಮಾರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಕೋಟಾ ಮೂಲದವನಾದ ಬಿಟ್ಟು, 2009ರಲ್ಲಿ ಚಿತ್ತೋರ್‌ಗಡ್‌ನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಜೈಪುರದ ನಂಗಾಲ್ ಜೈಸಾ ಬೋರಾ ಪ್ರದೇಶದಲ್ಲಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.