ನವದೆಹಲಿ: ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಮಂಗಳವಾರ ಅಧಿಕಾರ ವಹಿಸಿಕೊಂಡರು. 1984ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ಅಧಿಕಾರಿಯಾದ ಇವರ ಅಧಿಕಾರಾವಧಿ 2025ರವರೆಗೂ ಇರಲಿದೆ.

ಆಯುಕ್ತರಾಗಿದ್ದ ಅಶೋಕ್ ಲಾವಾಸ ಸ್ಥಾನದಲ್ಲಿ ರಾಜೀವ್ ಕುಮಾರ್ ಅಧಿಕಾರ ವಹಿಸಿಕೊಂಡರು. ಲಾವಾಸ ಅವರು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

2024ನೇ ಸಾಲಿನ ಲೋಕಸಭೆ ಚುನಾವಣೆ ರಾಜೀವ್ ಕುಮಾರ್ ಇವರ ಅವಧಿಯಲ್ಲೇ ನಡೆಯಲಿದೆ.

ನಿಯಮಗಳ ಪ್ರಕಾರ, ಚುನಾವಣಾ ಆಯುಕ್ತರ ಅಧಿಕಾರಾವಧಿ ನೇಮಕಗೊಂಡ ದಿನದಿಂದ ಆರು ವರ್ಷ ಅಥವಾ ಅವರಿಗೆ 65 ವರ್ಷ ಆಗುವವರೆಗೆ ಯಾವುದು ಮೊದಲೊ ಅಲ್ಲಿಯವರೆಗೆ ಇರಲಿದೆ. ಕುಮಾರ್ 1960ರ ಫೆಬ್ರುವರಿಯಲ್ಲಿ ಜನಿಸಿದ್ದಾರೆ.

ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿದ್ದ ಅವರುಈ ವರ್ಷದ ಫೆಬ್ರುವರಿಯಲ್ಲಿ ನಿವೃತ್ತರಾಗಿದ್ದರು. ನಂತರ ಅವರನ್ನು ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ (ಪಿ.ಇ.ಎಸ್.ಬಿ) ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.