ನವದೆಹಲಿ: 'ರಾಮ ರಾಜ್ಯ' ಎಂದರೆ ಎಲ್ಲರಿಗೂ ಶಿಕ್ಷಣ ಹಾಗೂ ಆರೋಗ್ಯ ಸಿಗಬೇಕು ಎಂದು ದೆಹಲಿ ಮಾಜಿ ಮುಖ್ಯಂತ್ರಿ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

'ದೇಶದಲ್ಲಿ ಯಾವುದೇ ಮಕ್ಕಳು ಅವಿದ್ಯಾವಂತರಾಗಿ ಉಳಿಯಬಾರದು. ಆರೋಗ್ಯದ ಸೌಲಭ್ಯ ಸಿಗದೇ ಹೋಗಬಾರದು' ಎಂದು ಅವರು ಉಲ್ಲೇಖ ಮಾಡಿದರು.

ಪೂರ್ವ ದೆಹಲಿಯ ಮಯೂರ ವಿಹಾರದಲ್ಲಿ ರಾಮಲೀಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ದೆಹಲಿಯ ಜನರ ಸೇವೆಗಾಗಿ ಆಮ್ ಆದ್ಮಿ ಪಕ್ಷವು ರಾಮರಾಜ್ಯದ ಆದರ್ಶಗಳನ್ನು ಪಾಲಿಸುತ್ತಿದೆ' ಎಂದು ನುಡಿದರು.

'ಶ್ರೀರಾಮ ದೇವರ ನ್ಯಾಯ, ಸಮಾನತೆ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು' ಎಂದು ಅವರು ಮನವಿ ಮಾಡಿದರು.

'ಭಾರತೀಯ ಹಾಗೂ ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮನ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಲೀಲಾದಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ಮಾಡುವ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೂ ಪಸರಿಸಬೇಕು' ಎಂದು ಹೇಳಿದರು.

'ರಾಮ ರಾಜ್ಯದ ಪ್ರಕಾರ ಯಾವುದೇ ಮಕ್ಕಳು ಅವಿದ್ಯಾವಂತರಾಗಿ ಉಳಿಯಬಾರದು. ಹಣದ ಕೊರತೆಯಿಂದ ಯಾರಿಗೂ ಆರೋಗ್ಯ ಸೇವೆ ಸಿಗದೇ ಹೋಗಬಾರದು' ಎಂದು ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.