ರಾಯಪುರ(ಛತ್ತಿಸಗಡ): ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ಕಾರಣರಮಣ್ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಬಹಳ ವರ್ಷಗಳ ನಂತರ ಬಿಜೆಪಿಇಲ್ಲಿ ಸೋತಿದೆ. ಇದಕ್ಕೆಸಾಕಷ್ಟು ಕಾರಣಗಳಿವೆ. ಅದನ್ನೆಲ್ಲ ಈಗ ಹೇಳಲು ಸಾಧ್ಯವಿಲ್ಲ. ಫಲಿತಾಂಶದ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಿ, ಎಲ್ಲಿ ಎಡವಿದ್ದೇವೆ ಎನ್ನುವುದನ್ನು ಪರಾಮರ್ಶಿಸುತ್ತೇವೆ‘ ಎಂದು ಹೇಳಿದರು.

’ರಾಜ್ಯಪಾಲರನ್ನು ಭೇಟಿಯಾಗಿ ನನ್ನ ರಾಜೀನಾಮೆ ಪತ್ರವನ್ನು ನೀಡಿದ್ದೇನೆ. ಬಿಜೆಪಿ ಸೋಲಿಗೆ ನೈತಿಕ ಹೊಣೆಹೊತ್ತು ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ಗೆಲುವು ಸಾಧಿಸಿದಾಗಲೆಲ್ಲ ಅದರ ಎಲ್ಲಾ ಹೆಸರನ್ನು ನನಗೆ ನೀಡಲಾಗಿತ್ತು. ಹಾಗೆಯೇ ಸೋತಾಗ ಅದಕ್ಕೆ ನಾನೇ ಜವಾಬ್ದಾರನಾಗುತ್ತೇನೆ. ಈಗಿನ ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ‘ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.