ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ‘ಒಂದು ರಾಷ್ಟ್ರ ಒಂದು ಚುನಾವಣೆ‘ ಸಮಿತಿಯು ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ.

ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಅಸ್ತಿತ್ವದಲ್ಲಿರುವ ಕಾನೂನು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಲಹೆಗಳನ್ನು ಸೂಚಿಸಿ ಎಂದು ಸಾರ್ವಜನಿಕ ನೋಟಿಸ್‌ನಲ್ಲಿ ತಿಳಿಸಲಾಗಿದೆ.
.ರಾಷ್ಟ್ರೀಯ ಹಿತಾಸಕ್ತಿಗಾಗಿ ‘ಒಂದು ದೇಶ, ಒಂದು ಚುನಾವಣೆ- ರಾಮನಾಥ ಕೋವಿಂದ್.
ಜ. 15ರೊಳಗೆ ಕಳುಹಿಸುವ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಸಮಿತಿ ತಿಳಿಸಿದೆ. ಸಮಿತಿಯ ವೆಬ್‌ಸೈಟ್ onoe.gov.inನಲ್ಲಿ ಅಥವಾ sc-hlc@gov.in ಗೆ ಇ–ಮೇಲ್ ಮಾಡುವ ಮೂಲಕ ಸಲಹೆಗಳನ್ನು ಸೂಚಿಸಬಹುದು ಎಂದು ಪ್ರಕರಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಈವರೆಗೂ ಎರಡು ಸಭೆಗಳನ್ನು ನಡೆಸಿದೆ. ಒಂದು ದೇಶ ಒಂದು ಚುನಾವಣೆ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಒಪ್ಪುವಂಥ ಒಂದು ದಿನಾಂಕವನ್ನು ಸೂಚಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿತ್ತು.
. ಒಂದು ದೇಶ, ಒಂದು ಚುನಾವಣೆ: ಕೋವಿಂದ್ ಸಮಿತಿ ಜತೆ ಕಾನೂನು ಆಯೋಗ ಚರ್ಚೆ.
ಆರು ರಾಷ್ಟ್ರೀಯ ಪಕ್ಷಗಳು, 33 ರಾಜ್ಯ ಪಕ್ಷಗಳು ಹಾಗೂ 7 ನೋಂದಾಯಿತ ಪಕ್ಷಗಳಿಗೆ ಪತ್ರ ಬರೆದಿತ್ತು. ಈ ಬಗ್ಗೆ ಕಾನೂನು ಅಯೋಗದ ಸಲಹೆಗಳನ್ನೂ ಸಮಿತಿ ಈಗಾಗಲೇ ಕೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.