ಇಬ್ಬರು ಬಾಲಕರು ಬೀದಿ ನಾಯಿಯೊಂದರ ಬಾಯಿ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ, ನೀರಿಗೆ ಎಸೆದಿರುವ ವಿಡಿಯೊವೊಂದು ಸದ್ಯ ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿರುವ ಪ್ರಾಣಿ ದಯಾ ಸಂಘ (ಪೆಟಾ) ಕೃತ್ಯವೆಸಗಿದ ಬಾಲಕರ ಗುರುತು ಪತ್ತೆ ಮಾಡಿಕೊಟ್ಟವರಿಗೆ ₹50 ಸಾವಿರ ಬಹುಮಾನ ಘೋಷಿಸಿದೆ.

ಅಲ್ಲದೆ, ಮಧ್ಯಪ್ರದೇಶದ ಉಜ್ಜೈನ್‌ನಲ್ಲಿ ಪೆಟಾ ಪೊಲೀಸರಿಗೆ ದೂರು ನೀಡಿದೆ. ಇದೇ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ಕೂಡಾ ಹಾಕಿದ್ದಾರೆ.

ಘಟನೆ ಎಲ್ಲಿ, ಯಾವಾಗ ನಡೆದಿದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಿಡಿಯೊದಲ್ಲಿ ಬಾಲಕರು ಹಿಂದಿ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.

ಈ ಪ್ರಕರಣದ ಬಗ್ಗೆ ಗೊತ್ತಿರುವ ಯಾರಾದರೂ +91 9820122602 ನಂಬರ್‌ಗೆ ಕರೆ ಮಾಡಿ ಪೆಟಾಕ್ಕೆ ಮಾಹಿತಿ ನೀಡಬಹುದು. ಅಥವಾ ಇ-ಮೇಲ್ Info@petaindia.org ಮೂಲಕ ಮಾಹಿತಿ ಹಂಚಿಕೊಳ್ಳಬಹುದು ಎಂದು ಪೆಟಾ ತಿಳಿಸಿದೆ.

ಅಪರಾಧ ಕೃತ್ಯದಲ್ಲಿ ಭಾಗಿಯಾದ ಬಾಲಕರ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡುವುದಾಗಿಯೂ ಪೆಟಾ ತಿಳಿಸಿದೆ.

‘ಈ ಕೃತ್ಯ ಮಾಡಿದವರ ಬಗ್ಗೆ ಗೊತ್ತಿರುವವರು ಮುಂದೆ ಮಾಹಿತಿ ಹಂಚಿಕೊಳ್ಳಬೇಕಾಗಿ ಪೆಟಾ ಕರೆ ನೀಡುತ್ತದೆ. ಹಿಂಸಾತ್ಮಕ ಪ್ರವೃತ್ತಿ ಹೊಂದಿರುವ ಜನ ಮೊದಲಿಗೆ ಪ್ರಾಣಿಗಳನ್ನು ಹಿಂಸಿಸುತ್ತಾರೆ. ನಂತರ ಮನುಷ್ಯರನ್ನು ಹಿಂಸಿಸುತ್ತಾರೆ ಎಂದು ಮನಶಾಸ್ತ್ರಜ್ಞರು ದೃಢೀಕರಿಸಿದ್ದಾರೆ. ಅಪರಾಧಿಗಳನ್ನು ಕಂಡುಹಿಡಿಲು ಜನ ಸಹಕರಿಸಬೇಕು. ಪ್ರಾಣಿಗಳನ್ನು ಹಿಂಸಿಸುವರು ತಮ್ಮ ಅಪರಾಧಗಳಿಂದ ಪಾರಾಗಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ನಾವು ಸಮಾಜಕ್ಕೆ ನೀಡಬೇಕಾಗಿದೆ,’ ಎಂದು ಪೆಟಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.