ನವದೆಹಲಿ/ಚೆನ್ನೈ: ಯರೋಪ್ ಹಾಗೂ ಭಾರತದಲ್ಲಿನ ಕೋವಿಡ್–19 ರೋಗಿಗಳಿಗೆ ಸ್ಟಿರಾಯ್ಡ್ ಔಷಧ ‘ಡೆಕ್ಸಾಮಿಥಾಸೋನ್’ನ ಅಧಿಕ ಡೋಸ್ ನೀಡಲಾಗಿತ್ತು. ಭಾರತದ ರೋಗಿಗಳಲ್ಲಿ ಔಷಧವು ಕಡಿಮೆ ಪರಿಣಾಮ ಬೀರಿತ್ತು ಎಂದು ಅಧ್ಯಯನವೊಂದು ಹೇಳಿದೆ.

ರೋಗಿಯು ವಾಸವಾಗಿದ್ದ ಭೌಗೋಳಿಕತೆಗೂ, ಆತನಿಗೆ ನೀಡಿದ ಔಷಧಿಯ (ಸ್ಟಿರಾಯ್ಡ್) ಪರಿಣಾಮಕ್ಕೂ ನಂಟಿದೆ ಎಂಬುದು ‘ಕೋವಿಡ್–ಸ್ಟಿರಾಯ್ಡ್–2’ ಟ್ರಯಲ್‌ನ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ಜಾರ್ಜ್ ಇನ್ಸ್‌ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಇಂಡಿಯಾದ ಡಾ.ಭರತ್ ಕುಮಾರ್ ತಿರುಪಾಕುಳಿ ವಿಜಯರಾಘವನ್ ಹಾಗೂ ಚೆನ್ನೈನ ಅಪೋಲೊ ಆಸ್ಪತ್ರೆ ನೇತೃತ್ವದಲ್ಲಿ ಈ ಕುರಿತು ಅಧ್ಯಯನ ನಡೆದಿದೆ. ‘ಲ್ಯಾನ್ಸೆಟ್ ರೀಜನಲ್ ಹೆಲ್ತ್–ಸೌತ್ ಏಷ್ಯಾ’ ನಿಯತಕಾಲಿಕದಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ಯುರೋಪ್ ಮತ್ತು ಭಾರತದಲ್ಲಿ ಕೈಗೊಂಡಿದ್ದ ಈ ಅಧ್ಯಯನಕ್ಕೆ ಮುಂಬೈನ ಹೋಮಿ ಭಾಭಾ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಹಾಗೂ ಆಸ್ಟ್ರೇಲಿಯಾದ ನ್ಯೂಸೌತ್‌ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಕೂಡ ಕೈಜೋಡಿಸಿದ್ದರು.

ಅಧ್ಯಯನದ ಭಾಗವಾಗಿದ್ದ ರೋಗಿಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿನವರಿಗೆ 10 ದಿನಗಳ ಕಾಲ ನಿತ್ಯವೂ ಇಂಜೆಕ್ಷನ್ ಮೂಲಕ 12 ಮಿಲಿ ಗ್ರಾಂ ಡೆಕ್ಸಾಮಿಥಾಸೋನ್ ನೀಡಲಾಗಿತ್ತು. ಇನ್ನೊಂದು ಗುಂಪಿನ ರೋಗಿಗಳಿಗೆ ಇದೇ ಅವಧಿಗೆ 6 ಮಿಲಿ ಗ್ರಾಂ ನೀಡಿ, ಔಷಧದ ಪರಿಣಾಮವನ್ನು ವಿಶ್ಲೇಷಿಸಲಾಗಿತ್ತು.

ಭಾರತದ ರೋಗಿಗಳ ತೂಕ ಕಡಿಮೆ ಇದ್ದು, ಅವರಿಗೆ ವೈರಾಣು ಪ್ರತಿಬಂಧಕ ಔಷಧಿಗಳ (ಆ್ಯಂಟಿವೈರಲ್ಸ್) ಅಧಿಕ ಡೋಸ್ ನೀಡಲಾಗಿತ್ತು, ಇಷ್ಟಾಗಿಯೂ ಭಾರತದಲ್ಲಿ ಈ ಸ್ಟಿರಾಯ್ಡ್‌ನ ಪರಿಣಾಮ ಕಡಿಮೆ ಇತ್ತು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ವಿವರಿಸಲಾಗಿದೆ.

ಭಾರತ ಮತ್ತು ಯುರೋಪ್‌ನ ರೋಗಿಗಳು ಡೆಕ್ಸಾಮಿಥಾಸೋನ್‌ನ ಅಧಿಕ ಡೋಸ್‌ಗೆ ಹೇಗೆ ಸ್ಪಂದಿಸಿದ್ದರು ಎಂಬುದು ಮಹತ್ವದ ಸಂಗತಿಯಾಗಿದೆ. ಕೋವಿಡ್–19 ವಿರುದ್ಧದ ಲಸಿಕೆ ಮತ್ತು ಔಷಧಗಳ ಕ್ಲಿನಿಕಲ್ ಟ್ರಯಲ್‌ಗೆ ವಿವಿಧ ದೇಶಗಳ ನಡುವೆ ವ್ಯಾಪಕ ಸಹಕಾರ ಅಗತ್ಯ ಎಂಬುದನ್ನು ಈ ಅಧ್ಯಯನ ಒತ್ತಿ ಹೇಳುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಚಿಕಿತ್ಸೆಯ ವಿವಿಧ ಹಂತಗಳಲ್ಲಿ, ಮರಣ ಪ್ರಮಾಣ, ರೋಗಿಗಳಿಗೆ ಜೀವರಕ್ಷಕ ವ್ಯವಸ್ಥೆ ಇಲ್ಲದೆಯೇ ಬದುಕುಳಿಯುವ ದಿನಗಳಲ್ಲಿಯೂ ವ್ಯತ್ಯಾಸ ಕಂಡುಬಂದಿತ್ತು.

ವ್ಯತ್ಯಾಸಕ್ಕೆ ಕಾರಣಗಳು: ಸ್ಟಿರಾಯ್ಡ್‌ನ ಪರಿಣಾಮದಲ್ಲಿ ವ್ಯತ್ಯಾಸ ಕಂಡು ಬರಲು ಹಲವಾರು ಕಾರಣಗಳು ಇರುವ ಸಾಧ್ಯತೆಯನ್ನೂ ಅಧ್ಯಯನ ಗುರುತಿಸಿದೆ.

ಆರೋಗ್ಯ ಮೂಲಸೌಕರ್ಯಗಳು, ರೋಗಿಗಳು ಈ ಮೊದಲೇ ಹೊಂದಿರಬಹುದಾದ ಇತರ ಆರೋಗ್ಯ ಸಮಸ್ಯೆಗಳು (ಮಧುಮೇಹ, ಅಧಿಕ ರಕ್ತದೊತ್ತಡ), ಚಿಕಿತ್ಸೆಗೆ ಸಂಬಂಧಿಸಿದ ಇತರ ಸಂಪನ್ಮೂಲಗಳ ಲಭ್ಯತೆ ಈ ವ್ಯತ್ಯಾಸಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.

ಈ ವಿಚಾರವಾಗಿ ಇಂಥ ಒಂದು ಅಧ್ಯಯನ ನಡೆದಿದೆ. ಇಂತಹ ಮತ್ತಷ್ಟು ಸಂಶೋಧನೆಗಳ ಅಗತ್ಯ ಇದೆ ಎಂದೂ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.