ಕೋಲ್ಕತ್ತ: ಇಲ್ಲಿನ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ಹಿಂದೆ ವಿರೋಧ ಪಕ್ಷದವರ ಕೈವಾಡವಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

‘ಈ ವಿಷಯದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಧರಣಿ ನಿರತ ವೈದ್ಯರ ವಿರುದ್ಧ ನನಗೆ ಯಾವುದೇ ದೂರಿಲ್ಲ. ಆದರೆ ಕೆಲವು ವಿರೋಧ ಪಕ್ಷಗಳು ಈ ವಿಷಯದಲ್ಲಿ ತೊಂದರೆಯನ್ನುಂಟು ಮಾಡಲು ಪ್ರಯತ್ನಿಸುತ್ತಿವೆ. ನೀವು ಆ ವಿಡಿಯೊವನ್ನು ನೋಡಿದರೆ ಅಲ್ಲಿ ಏನು ನಡೆದಿದೆ ಎನ್ನುವುದು ಗೊತ್ತಾಗಲಿದೆ' ಎಂದರು.

ಬುಧವಾರ ಮಧ್ಯರಾತ್ರಿ ಪ್ರತಿಭಟನಾಕಾರರ ಸೋಗಿನಲ್ಲಿ ಆಸ್ಪತ್ರೆಗೆ ನುಗ್ಗಿದ ಸುಮಾರು 40 ಜನರ ಗುಂಪೊಂದು ದಾಂಧಲೆ ನಡೆಸಿತ್ತು. ಆಸ್ಪತ್ರೆಯ ಕಟ್ಟಡ, ಯಂತ್ರೋಪಕರಣ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಸಿಸಿಟಿವಿ ಕ್ಯಾಮೆರಾಗಳಿಗೂ ಹಾನಿ ಮಾಡಿದ್ದರು. ಆಗಸ್ಟ್ 9ರಿಂದ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಕಿರಿಯ ವೈದ್ಯರ ಪ್ರತಿಭಟನಾ ಸ್ಥಳವನ್ನೂ ನಾಶ ಮಾಡಿದ್ದರು.
.ಕೋಲ್ಕತ್ತ ಆಸ್ಪತ್ರೆ ಮೇಲೆ ದಾಳಿ: 9 ಜನರ ಬಂಧನ.ಕೋಲ್ಕತ್ತ ವಿದ್ಯಾರ್ಥಿನಿ ಕೊಲೆ: ಉಸಿರುಗಟ್ಟಿಸಿ ಕೊಲೆ, ನಂತರ ಅತ್ಯಾಚಾರ ಶಂಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.