ತಿರುವನಂತಪುರ: ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಸ್ವೀಕರಿಸಲುಕೇರಳದ ಸಿಪಿಎಂ ಹಿರಿಯ ನಾಯಕಿ ಮತ್ತು ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ನಿರಾಕರಿಸಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

‘64ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಬಂಧರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಶೈಲಜಾ ಅವರನ್ನು ಸಂಪರ್ಕಿಸಿತ್ತು.ಕೋವಿಡ್-19 ಸಾಂಕ್ರಾಮಿಕ ಮತ್ತು ನಿಫಾ ವಿರುದ್ಧದ ಅವರ ವೈಯಕ್ತಿಕ ಪರಿಶ್ರಮವನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.ಆದರೆ, ಶೈಲಜಾ ಅವರು ಇದರಲ್ಲಿನ ಪರಿಶ್ರಮ ವೈಯಕ್ತಿಕವಾದುದಲ್ಲ, ಎಲ್ಡಿಎಫ್ ಸರ್ಕಾರದಲ್ಲಿದ್ದ ಎಲ್ಲರ ಸಾಂಘಿಕ ಶ್ರಮವೆಂದು ಭಾವಿಸಿ ಪ್ರಶಸ್ತಿ ನಿರಾಕರಿಸಿದ್ದಾರೆ’ ಎಂದು ಶೈಲಜಾ ಅವರ ಸಮೀಪವರ್ತಿಗಳ ಮೂಲಗಳು ಹೇಳಿವೆ.

ಮತ್ತೊಂದು ಮೂಲದ ಪ್ರಕಾರ,‘ಪಕ್ಷದ ಕೇಂದ್ರ ಸಮಿತಿ ಸದಸ್ಯರ ಸೂಚನೆ ಮೇರೆಗೆ ಈ ಪ್ರಶಸ್ತಿ ಸ್ವೀಕರಿಸಲು ಶೈಲಜಾ ನಿರಾಕರಿಸಿದ್ದಾರೆ. ಕಮ್ಯನಿಸ್ಟರಿಗೆ ವಿರುದ್ಧವಾಗಿದ್ದ ರೇಮನ್ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುವುದು ಸೈದ್ಧಾಂತಿಕವಾಗಿಯೂ ಸರಿಯಲ್ಲ. ಅಲ್ಲದೇ, ಕೋವಿಡ್ ಮತ್ತು ನಿಫಾ ವಿರುದ್ಧದ ಹೋರಾಟದಲ್ಲಿ ಮುಖ್ಯಮಂತ್ರಿಪಿಣರಾಯಿ ವಿಜಯನ್ ಸಂಪುಟದ ಎಲ್ಲರ ಜಂಟಿ ಹೋರಾಟವಾಗಿತ್ತು’.

ಕಮ್ಯುನಿಸ್ಟರ ಮೇಲೆ ದಬ್ಬಾಳಿಕೆ ನಡೆಸಿದ ಇತಿಹಾಸ ಹೊಂದಿರುವ ಫಿಲಿಪ್ಪೀನ್ಸ್ ದೇಶದ ಮಾಜಿ ಅಧ್ಯಕ್ಷ, ದಿವಂಗತ ರೇಮನ್ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಲು

ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ‘ಫಿಲಿಪ್ಪೀನ್ಸ್ನಲ್ಲಿಕಮ್ಯುನಿಸ್ಟರ ಮೇಲೆ ದಬ್ಬಾಳಿಕೆ ನಡೆಸಿದ ಆ ದೇಶದ ಮಾಜಿ ಅಧ್ಯಕ್ಷರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ತಾತ್ವಿಕ ಮತ್ತು ಸೈದ್ಧಾಂತಿಕ ಕಾರಣಕ್ಕೆ ಶೈಲಜಾ ಅವರು ಪ್ರಶಸ್ತಿಯನ್ನು ವಿನಯದಿಂದ ನಿರಾಕರಿಸಿದ್ದಾರೆ’ಎಂದು ಹೇಳಿದ್ದು, ಶೈಲಜಾ ಅವರ ತೀರ್ಮಾನವನ್ನು ಬೆಂಬಲಿಸಿದ್ದಾರೆ.

‘ಶೈಲಜಾ ಟೀಚರ್’ ಎಂದೇ ಜನಪ್ರಿಯವಾಗಿರುವ ಶೈಲಜಾ, ಪಿಣರಾಯಿ ವಿಜಯನ್ ಅವರ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿ ದಕ್ಷತೆಯ ಕೆಲಸದಿಂದಾಗಿ ಪ್ರಶಂಸೆಗೆ ಪಾತ್ರರಾಗಿದ್ದರು. ಶೈಲಜಾ ಅವರ ನಾಯಕತ್ವದಲ್ಲಿಆರೋಗ್ಯ ಇಲಾಖೆನಿಫಾ ಮತ್ತು ಕೋವಿಡ್ ವಿರುದ್ಧ ವಹಿಸಿದ ಪಾತ್ರದಿಂದಾಗಿ ಅಂತರರಾಷ್ಟ್ರೀಯ ವೇದಿಕೆಗಳೂ ಶೈಲಜಾ ಅವರನ್ನು ಗೌರವಿಸಿದ್ದವು.

2021ರವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಜಯ ಸಾಧಿಸಿದ ಶೈಲಜಾ ಅವರ ವಿರುದ್ಧ ಸುಖಾಸುಮ್ಮನೆ ಆರೋಪಗಳು ಕಾವು ಪಡೆದವು. ಪಿಣರಾಯಿ ವಿಜಯನ್ ಅವರ ಎರಡನೇ ಅವಧಿಯ ಸರ್ಕಾರದ ಸಂಪುಟದಿಂದ ಶೈಲಜಾ ಅವರನ್ನು ಕೈಬಿಡಲಾಗಿತ್ತು.

ಫಿಲಿಪ್ಪೀನ್ಸ್ ಮಾಜಿ ಅಧ್ಯಕ್ಷರ ಹೆಸರಿನಲ್ಲಿ ಪ್ರಶಸ್ತಿ
1957ರ ಮಾರ್ಚ್ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟ ರೇಮನ್ಮ್ಯಾಗ್ಸೆಸೆ ಅವರ ಗೌರವಾರ್ಥ ಅದೇ ವರ್ಷದಲ್ಲಿರೋಕ್ಫೆಲ್ಲರ್ ಬ್ರದರ್ಸ್ ಫಂಡ್ (ಆರ್ಬಿಎಫ್) ಪ್ರಶಸ್ತಿಗಳನ್ನು ಸ್ಥಾಪಿಸಿತು.

ಸರ್ಕಾರಿ ಸೇವೆ, ಸಾರ್ವಜನಿಕ ಸೇವೆ, ಅಂತರರಾಷ್ಟ್ರೀಯ ಅರಿವು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಹಾಗೂ ಸಮುದಾಯದ ನಾಯಕತ್ವಕ್ಕಾಗಿ ಫಿಲಿಪ್ಪೀನ್ಸ್ ಮತ್ತು ಏಷ್ಯಾದ ಇತರ ರಾಷ್ಟ್ರಗಳು ಸಲ್ಲಿಸಿದ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದುಏಷ್ಯಾದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದೆನಿಸಿದೆ.

ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ, ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್, ಮಾಜಿ ಚುನಾವಣಾ ಆಯುಕ್ತ ಟಿ.ಎನ್. ಶೇಷನ್, ಸಂಗೀತ ವಿದುಷಿ ಎಂ.ಎಸ್. ಸುಬ್ಬಲಕ್ಷ್ಮೀ, ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್, ಪುದುಚೇರಿ ಮಾಜಿ ಗವರ್ನರ್ ಕಿರಣ್ ಬೇಡಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರುಈ ಪ್ರಶಸ್ತಿಗೆ ಭಾಜನರಾದ ಭಾರತೀಯರೆನಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.