ತಿರುವನಂತಪುರ: ಶಬರಿಮಲೆಯಲ್ಲಿ ಸಮರ್ಪಕ ನಿರ್ವಹಣೆ ಇಲ್ಲ ಎಂದು ಆರೋಪಿಸಿ ಯಾತ್ರಿಗಳು ಪ್ರತಿಭಟನೆ ನಡೆಸಿದ್ದು ಒಂದೆಡೆಯಾದರೆ, ದೇವಸ್ಥಾನದ 18 ಮೆಟ್ಟಿಲುಗಳ ಇಕ್ಕೆಲದಲ್ಲಿ ಶಿಲಾಸ್ತಂಭಗಳನ್ನು ಅಳವಡಿಸಿರುವುದಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಮೆಟ್ಟಿಲ ಮೇಲೆ, ಮಡಿಸಬಹುದಾದ ಚಾವಣಿಯನ್ನು ಅಳವಡಿಸುವುದಕ್ಕಾಗಿ ಈ ಶಿಲಾಸ್ತಂಭಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

‘ಈ ಶಿಲಾಸ್ತಂಭಗಳು ದೇವರ ದರ್ಶನಕ್ಕೆ ಅಡ್ಡಿಯನ್ನುಂಟು ಮಾಡುತ್ತಿವೆ’ ಎಂದು ಕೆಲ ಭಕ್ತರ ಆಕ್ಷೇಪವಾಗಿದ್ದರೆ, ಈ ಸ್ತಂಭಗಳಿಂದಾಗಿ ನೂಕುನುಗ್ಗಲು ಉಂಟಾಯಿತು ಎಂದೂ ಕೆಲವರು ಟೀಕಿಸಿದ್ದಾರೆ.

ಶಿಲಾಸ್ತಂಭಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಪೊಲೀಸರು ತಿರುವಾಂಕೂರು ದೇವಸ್ಥಾನ ಮಂಡಳಿ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ಹೇಳಿವೆ.

‘ಈ ಶಿಲಾಸ್ತಂಭಗಳಿಂದ ಪೊಲೀಸರ ಕರ್ತವ್ಯ ನಿರ್ವಹಣೆಗೂ ಅಡ್ಡಿಯಾಗುತ್ತಿದೆ. ಭಕ್ತರ ದಟ್ಟಣೆ ನಿರ್ವಹಣೆಗೂ ತೊಂದರೆಯಾಗುತ್ತಿರುವ ಕಾರಣ, ಇವುಗಳನ್ನು ಅಳವಡಿಸುವ ಕುರಿತು ಮರುಚಿಂತನೆ ಮಾಡಬೇಕು ಎಂಬುದಾಗಿ ಪೊಲೀಸರು ಮಂಡಳಿಗೆ ತಿಳಿಸಿದ್ದಾರೆ’ ಎಂದು ಇವೇ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.