ಶಬರಿಮಲೆ (ಕೇರಳ): ಹೆಸರಾಂತ ಧಾರ್ಮಿಕ ಯಾತ್ರಾ ಸ್ಥಳ, ಇಲ್ಲಿನ ಶಬರಿಮಲೆ ದೇವಸ್ಥಾನವನ್ನು ಭಕ್ತರ ಪ್ರವೇಶಕ್ಕಾಗಿ ಶನಿವಾರ ಮುಕ್ತಗೊಳಿಸಲಾಯಿತು. ಕೋವಿಡ್–19 ಪರಿಣಾಮ ಉದ್ಭವಿಸಿರುವ ಸ್ಥಿತಿಯಿಂದಾಗಿ ಆರು ತಿಂಗಳಿಂದ ಪ್ರವೇಶ ನಿರ್ಬಂಧಿಸಲಾಗಿತ್ತು.

ಮಾಸ್ಕ್ ಧರಿಸಿದ್ದ ಹಾಗೂ ಕೋವಿಡ್–19 ಪರೀಕ್ಷೆಗೆ ಸಂಬಂಧಿಸಿದಂತೆ ನೆಗೆಟಿವ್ ಪ್ರಮಾಣಪತ್ರಗಳನ್ನು ಹೊಂದಿದ್ದ ಕೆಲ ಭಕ್ತರು ಪ್ರವೇಶ ಪಡೆದು ಪೂಜೆ ಸಲ್ಲಿಸಿದರು.

ಮಾಸಿಕ ಪೂಜಾ ಕಾರ್ಯಕ್ರಮಕ್ಕಾಗಿ ಶುಕ್ರವಾರ ದೇಗುಲಕ್ಕೆ ಪ್ರವೇಶ ನೀಡಲಾಗಿತ್ತು. ಭಕ್ತರು ಪೂಜೆ ಸಲ್ಲಿಸಲು ಅಕ್ಟೋಬರ್ 21ರವರೆಗೂ ಅವಕಾಶ ಕಲ್ಪಿಸಲಾಗಿದೆ. 10ರಿಂದ 60 ವರ್ಷದವರು, ಧಾರ್ಮಿಕ ಯಾತ್ರೆಯಲ್ಲಿ ಭಾಗವಹಿಸಲು ಅರ್ಹರಿದ್ದೇವೆ ಎಂದು ನಿರೂಪಿಸುವ ವೈದ್ಯಕೀಯ ಪ್ರಮಾಣಪತ್ರ ತೋರಿದ ಬಳಿಕವಷ್ಟೇ ಅವಕಾಶ ದೊರೆಯತ್ತದೆ.

ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದ ಬಳಿಕ (ಮಾರ್ಚ್ 25ರ ನಂತರ) ಇದೇ ಮೊದಲ ಬಾರಿಗೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ದೇಗುಲದ ನಿರ್ವಹಣೆ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ಥಾನ ಮಂಡಳಿಯ ಪ್ರತಿನಿಧಿಗಳು ತಿಳಿಸಿದರು.

ಸಾಮಾನ್ಯವಾಗಿ ದೇಗುಲದ ಆವರಣದಲ್ಲಿ ಕಾಣಬರುತ್ತಿದ್ದ ನೂಗುನುಗ್ಗಲು, ಗಿಜಿಗಿಡುವ ಚಿತ್ರಣ ಈ ಬಾರಿ ಕೋವಿಡ್ ಕಾರಣದಿಂದಾಗಿ ಕಾಣಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.