ನವದೆಹಲಿ:ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಪೈಲಟ್‌ಗಳಿಗೆ ವಿಮಾನ ಸುರಕ್ಷತೆಗೆ ವಿರುದ್ಧವಾಗಿ ದೋಷಪೂರಿತ ಸಿಮ್ಯುಲೇಟರ್‌ನಲ್ಲಿ ತರಬೇತಿ ನೀಡಿದ್ದ ತಪ್ಪಿಗಾಗಿ ಸ್ಪೈಸ್ ಜೆಟ್‌ಗೆ ₹10 ಲಕ್ಷ ದಂಡವನ್ನುನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ವಿಧಿಸಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.

ಸಿಮ್ಯುಲೇಟರ್‌ನಲ್ಲಿ ಸ್ಪೈಸ್ ಜೆಟ್‌ನ ಪೈಲಟ್‌ಗಳು ತರಬೇತಿ ಪಡೆಯುತ್ತಿರುವುದು ಪತ್ತೆಯಾದ ನಂತರ ಕಳೆದ ತಿಂಗಳು ಮ್ಯಾಕ್ಸ್ ವಿಮಾನ ಚಾಲನೆ ಮಾಡದಂತೆ ಸ್ಪೈಸ್ ಜೆಟ್‌ನ 90 ಪೈಲಟ್‌ಗಳು ಮತ್ತು ಸಹ ಪೈಲಟ್‌ಗಳಿಗೆಕಳೆದ ತಿಂಗಳುಡಿಜಿಸಿಎ ನಿರ್ಬಂಧ ಹೇರಿತ್ತು.

‘ವಿಮಾನವು ವಾಯು ಮಾರ್ಗದಲ್ಲಿ ಸ್ಥಗಿತಗೊಂಡಾಗ, ಪೈಲಟ್‌ಗಳ ತರಬೇತಿಯಲ್ಲಿ ದೋಷವಿರುವುದು ಪತ್ತೆಯಾಯಿತು. ಈ ಸಂಬಂಧ ಏಪ್ರಿಲ್‌ನಲ್ಲಿ ಶೋಕಾಸ್ ನೋಟಿಸ್ ನೀಡಲಾಗಿತ್ತು.ವಿಮಾನಯಾನ ಸಂಸ್ಥೆಯ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದ ಕಾರಣಕ್ಕೆ ಡಿಜಿಸಿಎ, ಪೈಲಟ್‌ಗಳಿಗೆ ನಿರ್ಬಂಧ ಹೇರಿ, ಸಂಸ್ಥೆಗೆ ವಿಧಿಸಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.