ಶಿರಡಿ:ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಭಕ್ತರಿಗೆ ಬೆಳಗಿನ ಜಾವ ಮತ್ತು ತಡ ರಾತ್ರಿ ನಡೆಸುವ ವಿಶೇಷ 'ಆರತಿ'ಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.

'ಮಂಗಳವಾರದಿಂದಲೇ ಜಾರಿಗೆ ಬರುವಂತೆ ಭಕ್ತರಿಗೆ ಬೆಳಗಿನ ಜಾವ ಮತ್ತು ತಡ ರಾತ್ರಿ ನಡೆಯುವ ವಿಶೇಷ 'ಆರತಿ'ಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ' ಎಂದು ಸಾಯಿಬಾಬಾ ದೇವಸ್ಥಾನದ ಟ್ರಸ್ಟ್ ತಿಳಿಸಿದೆ.

'ಬೆಳಗಿನ ಜಾವ ನಡೆಯುವ 'ಕಾಕಡ್ ಆರತಿ'ಯ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 4.30ರಿಂದ 5.15ರ ವರೆಗೆ 'ಕಾಕಡ್ ಆರತಿ' ಪೂಜೆ ನಡೆಯಲಿದೆ. 'ಶೇಜ್ ಆರತಿ (ರಾತ್ರಿ ಆರತಿ)'ಯು ರಾತ್ರಿ 10.30ರಿಂದ ಆರಂಭಗೊಳ್ಳಲಿದೆ.

ಕೋವಿಡ್ ಸೋಂಕು ತಡೆ ನಿಟ್ಟಿನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರ ವರೆಗೆ ನಿಷೇಧವಿದ್ದುದರಿಂದ ಕಾಕಡ್ ಆರತಿ ಮತ್ತು ಶೇಜ್ ಆರತಿಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಸಾಧ್ಯವಾಗುತ್ತಿರಲಿಲ್ಲ. ವಿಶೇಷ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಭಕ್ತರು ಒತ್ತಾಯಿಸಿದ್ದರು' ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನ ಮುಖ್ಯಸ್ಥೆ ಭಾಗ್ಯಶ್ರೀ ಬನಾಯತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.