ಪುಣೆ: ₹ 175 ಕೋಟಿಯಷ್ಟು ಆದಾಯ ತೆರಿಗೆ ಪಾವತಿಸುವುದರಿಂದ ಶಿರಡಿಯ ಶ್ರೀಸಾಯಿಬಾಬಾ ದೇವಸ್ಥಾನ ಟ್ರಸ್ಟ್ಗೆ ವಿನಾಯಿತಿ ನೀಡಲಾಗಿದೆ.

‘ಸುಪ್ರೀಂಕೋರ್ಟ್ನ ಆದೇಶದ ಅನ್ವಯ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ’ ಎಂದುಟ್ರಸ್ಟ್ನ ಪ್ರಕಟಣೆ ಶುಕ್ರವಾರ ತಿಳಿಸಿದೆ.

‘2015–16ನೇ ಹಣಕಾಸು ವರ್ಷದ ತೆರಿಗೆ ನಿರ್ಧರಿಸುವ ಸಂದರ್ಭದಲ್ಲಿ, ಆದಾಯ ತೆರಿಗೆ ಇಲಾಖೆಯು ಸಾಯಿಬಾಬಾ ಸಂಸ್ಥಾನವನ್ನು ಧಾರ್ಮಿಕ ಟ್ರಸ್ಟ್ ಬದಲಾಗಿ ಚಾರಿಟಬಲ್ ಟ್ರಸ್ಟ್ ಎಂದು ಪರಿಗಣಿಸಿ, ದೇಣಿಗೆ ಮೇಲೆ ಶೇ 30ರಷ್ಟು ಆದಾಯ ತೆರಿಗೆ ವಿಧಿಸಿತ್ತು’.

‘ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ನ ಆದೇಶದಂತೆ, ಸಾಯಿಬಾಬಾ ಸಂಸ್ಥಾನವನ್ನು ಧಾರ್ಮಿಕ ಹಾಗೂ ಚಾರಿಟಬಲ್ ಟ್ರಸ್ಟ್ ಎಂದು ಪರಿಗಣಿಸಿದ ಇಲಾಖೆ, ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಿದೆ’ ಎಂದು ಟ್ರಸ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.