ಪಂಚಕುಲಾ: 2007 ರಲ್ಲಿ ನಡೆದ ಸಮಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟ ಪ್ರಕರಣದ ವಿಚಾರಣೆಯ ತೀರ್ಪು ಪ್ರಕಟಿಸುವುದನ್ನು ಎನ್ಐಎ ವಿಶೇಷ ನ್ಯಾಯಾಲಯ ಸೋಮವಾರ ತಡೆ ಹಿಡಿದಿದೆ. ಇದೇ 14 ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಸ್ಫೋಟ ಸಂಬಂಧ ಕೆಲವು ಸಾಕ್ಷ್ಯಗಳನ್ನು ಹೊಂದಿರುವುದಾಗಿ ಪಾಕಿಸ್ತಾನದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.

ರಹೀಲಾ ಎಲ್.ವಕೀಲ್ ಅವರ ಪರವಾಗಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಎನ್ಐಎ ವಕೀಲ ರಂಜನ್ ಮಲ್ಹೋತ್ರ ಅವರು ತಿಳಿಸಿದ್ದಾರೆ.

ಇದೇ 14 ಕ್ಕೆ ತೀರ್ಪು ಮುಂದೂಡಿರುವುದಾಗಿ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ಪ್ರಕಟಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವಾದ ಮಂಡನೆ ಇದೇ 6 ರಂದು ಮುಕ್ತಾಯವಾಗಿತ್ತು.

2007 ರ ಫೆ.18 ರಂದು ನಡೆದಿದ್ದ ಸಮಜೋತಾ ರೈಲು ಸ್ಫೋಟದಲ್ಲಿ 68 ಮಂದಿ ಸಜೀವ ದಹನವಾಗಿದ್ದರು. ಇವರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಪ್ರಜೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.