ನವದೆಹಲಿ: ಕೊಕಾ ಕೋಲಾ, ಥಂಬ್ಸ್ ಅಪ್ ಅನ್ನು ನಿಷೇಧಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿರುವ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ₹ 5 ಲಕ್ಷ ದಂಡ ವಿಧಿಸಿದೆ.

ಈ ತಂಪು ಪಾನೀಯಗಳು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ ಎಂದು ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಉಮೇದ್ ಸಿನ್ಹಾ ಪಿ. ಚಾವ್ಡಾ ವಾದಿಸಿದ್ದರು. ‘ಇದು ಸೂಕ್ತವಲ್ಲದ ಕಾರಣ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ನಿರ್ದಿಷ್ಟವಾಗಿ ಈ ಎರಡು ಬ್ರಾಂಡ್ಗಳನ್ನೇ ಗುರಿಯಾಗಿಸಿದ್ದು ಏಕೆ ಮತ್ತು ತಮ್ಮ ಆರೋಪಕ್ಕೆ ಆಧಾರ ಏನು ಎಂದು ಸಮರ್ಥನೆ ನೀಡಲು ಅರ್ಜಿದಾರರ ಪರ ವಕೀಲರರು ವಿಫಲರಾಗಿದ್ದಾರೆ ಎಂದೂ ನ್ಯಾಯಪೀಠ ಹೇಳಿತು.

ದಂಡದ ಮೊತ್ತವನ್ನು ಒಂದು ತಿಂಗಳ ಅವಧಿಯಲ್ಲಿ ಸುಪ್ರೀಂ ಕೋರ್ಟ್ನ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು ಮತ್ತು ಈ ಮೊತ್ತವನ್ನು ಸುಪ್ರೀಂ ಕೋರ್ಟ್ ಅಡ್ವೋಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ಗೆ ನೀಡಬೇಕು ಎಂದು ನ್ಯಾಯಮೂರ್ತಿ ಡಿ.ವೈಚಂದ್ರಚೂಡ್ ಅವರಿದ್ದ ನ್ಯಾಯಪೀಠ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.