ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಸೇತು ನಕ್ಷೆ ಸಿದ್ಧಪಡಿಸಿದ ಇಸ್ರೊ ವಿಜ್ಞಾನಿಗಳು

Published : 8 ಜುಲೈ 2024, 22:42 IST
Last Updated : 8 ಜುಲೈ 2024, 22:42 IST
ಫಾಲೋ ಮಾಡಿ
Comments

ನವದೆಹಲಿ: ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ರಾಮಸೇತುವಿನ ಅತ್ಯಂತ ವಿವರವಾದ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ಈ ಸೇತುವೆಯ ಮೂಲದ ಕುರಿತು ದೀರ್ಘಕಾಲದಿಂದ ಇರುವ ವಿವಾದಗಳನ್ನು ಬಗೆಹರಿಸಲು ಈ ನಕ್ಷೆಯಿಂದ ಸಾಧ್ಯವಾಗಲಿದೆ ಎಂದು ಭಾವಿಸಲಾಗಿದೆ.

29 ಕಿ.ಮೀ. ಉದ್ದದ ಸೇತುವೆಯ ಸಮುದ್ರದಡಿಯ ನಕ್ಷೆಯನ್ನು ಇಷ್ಟೊಂದು ನಿಖರವಾಗಿ ಸಿದ್ಧಪಡಿಸಿದಿರುವುದು ಇದೇ ಮೊದಲು. ಸೇತುವೆಯು ಸಮುದ್ರದ ತಳದಿಂದ ಎಂಟು ಮೀ.ನಷ್ಟು ಎತ್ತರದಲ್ಲಿದೆ ಎಂದು ನಕ್ಷೆಯಲ್ಲಿ ತೋರಿಸಲಾಗಿದೆ.

‘ನಾಸಾದ ಐಸಿಇಸ್ಯಾಟ್–2 ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ನಕ್ಷೆ ಸಿದ್ಧಪಡಿಸಲಾಗಿದೆ. ರಾಮಸೇತು ಮತ್ತು ಅದರ ಉಗಮದ ಬಗ್ಗೆ ಇನ್ನಷ್ಟು ತಿಳಿಯಲು ಇದು ನೆರವಾಗಲಿದೆ’ ಎಂದು ಇಸ್ರೊದ ನ್ಯಾಷನಲ್‌ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ವಿಜ್ಞಾನಿಗಳು ಹೇಳಿರುವುದಾಗಿ ‘ಸೈಂಟಿಫಿಕ್ ರಿಪೋರ್ಟ್ಸ್‌’ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

ನಾಸಾದ ಉಪಗ್ರಹವು ಲೇಸರ್‌ ಆ್ಯಲ್ಟಿಮೀಟರ್‌ ಉಪಕರಣ ಹೊಂದಿದ್ದು, ಅದರ ನೆರವಿನಿಂದ ಸಮುದ್ರದ ಆಳವಿಲ್ಲದ ಪ್ರದೇಶದ ಯಾವುದೇ ರಚನೆಯ ಎತ್ತರವನ್ನು ಅಳೆಯಲು ಸಾಧ್ಯವಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT