ಬೆಂಗಳೂರು: ಲೈಂಗಿಕ ನಿಲುವು ಸ್ವಾಭಾವಿಕ ಮತ್ತು ನೈಸರ್ಗಿಕ. ಯಾರ ಮೇಲೆ ಸೆಳೆತ ಉಂಟಾಗುತ್ತದೆ ಎಂಬುದು ಅವನು ಅಥವಾ ಅವಳ ನಿಯಂತ್ರಣದಲ್ಲಿರುವುದಿಲ್ಲ. ಯಾವುದೇ ರೀತಿಯ ನಿಯಂತ್ರಣವು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಹೇಳುವ ಮೂಲಕ ಸುಪ್ರಿಂಕೋರ್ಟ್ ಸಲಿಂಗಿಗಳು, ದ್ವಿಲಿಂಗಿಗಳು ಅಥವಾ ಲಿಂಗಪರಿವರ್ತನೆ ಮಾಡಿಕೊಂಡ (ಎಲ್‌ಜಿಬಿಟಿಕ್ಯು) ಸಮುದಾಯದ ಬಹುಕಾಲದ ಬೇಡಿಕೆಗೆ ಇಂಬು ನೀಡಿದೆ.

ಸುಪ್ರಿಂ ಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ನೀಡಿರುವಈ ಮಹತ್ವದ ತೀರ್ಪಿನ ಬಗ್ಗೆ ನೀವು ತಿಳಿದಿರಬೇಕಾದ 6 ಸಂಗತಿಗಳು ಇಲ್ಲಿವೆ.

1) ಐಪಿಸಿ 377 ಏನು ಹೇಳುತ್ತೆ?

ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಯ ಜೊತೆ ಲೈಂಗಿಕ ಸಂಪರ್ಕ, ಭಾರತೀಯ ದಂಡ ಸಂಹಿತೆಯ (ಐಪಿಸಿ) 377ನೇ ಸೆಕ್ಷನ್ ಪ್ರಕಾರ ಅಪರಾಧ. ಇದಕ್ಕೆ 10 ವರ್ಷಗಳವರೆಗೆ ಸಜೆ ವಿಧಿಸಬಹುದು. ಈ ನಿಯಮವನ್ನು ವಿರೋಧಿಸಿ ವಿವಿಧ ನ್ಯಾಯಾಲಯಗಳಲ್ಲಿ 2001ರಿಂದ ಹೋರಾಟ ನಡೆಯುತ್ತಿತ್ತು.

2) ಕಾನೂನು ಹೊಯ್ದಾಟ

2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದಿತ್ತು. 2013ರಲ್ಲಿ ಈ ತೀರ್ಪನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ನಿರ್ಬಂಧ ಹಿಂಪಡೆಯುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು 2014ರ ಜನವರಿಯಲ್ಲಿ ಸುಪ್ರಿಂಕೋರ್ಟ್ ವಜಾ ಮಾಡಿತ್ತು. ನಂತರ ಪ್ರಕರಣ ಮುಖ್ಯ ನ್ಯಾಯಮೂರ್ತಿ ಬಳಿ ಬಂತು. ‘ವಯಸ್ಕರಿಬ್ಬರ ನಡುವೆ ಸಮ್ಮತಿಯ ಸಲಿಂಗ ಲೈಂಗಿಕ ಸಂಬಂಧ ಅಪರಾಧ’ ಎಂದು ಪರಿಗಣಿಸುವ 2013ರ ತನ್ನ ತೀರ್ಪನ್ನು ಮರುಪರಿಶೀಲಿಸಲು 2018ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.

3) ಗುರುವಾರದ ತೀರ್ಪಿನಲ್ಲಿ ಸುಪ್ರಿಂಕೋರ್ಟ್ ಹೇಳಿದ್ದೇನು?

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡಸಂಹಿತೆ (ಐಪಿಸಿ) ಸೆಕ್ಷನ್ 377 ಸಂವಿಧಾನದ 14ನೇ ವಿಧಿಯಯನ್ನು ಉಲ್ಲಂಘಿಸುತ್ತದೆ. ಸಲಿಂಗಿಗಳು, ದ್ವಿಲಿಂಗಿಗಳು ಅಥವಾ ಲಿಂಗಪರಿವರ್ತನೆ ಮಾಡಿಕೊಂಡ (ಎಲ್‌ಜಿಬಿಟಿಕ್ಯು) ಸಮುದಾಯವರು ಇತರ ನಾಗರಿಕರು ಹೊಂದಿರುವಂತೆ ಸಮಾನ ಹಕ್ಕು ಪಡೆದಿರುತ್ತಾರೆ ಎಂದು ಸುಪ್ರೀಂಕೋರ್ಟ್ ಗುರುವಾರದ (ಸೆ.6) ಹೇಳಿದೆ.

4) ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳು ಯಾರು?

ಮುಖ್ಯನಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಖಾನ್‌ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರಿದ್ದ ಐವರು ನ್ಯಾಯಾಧೀಶರ ನ್ಯಾಯಪೀಠರು ಪ್ರಕರಣದ ವಿಚಾರಣೆ ನಡೆಸಿತು.

5) ಸರ್ಕಾರ ಹೇಳಿದ್ದೇನು?

‘ಸೆಕ್ಷನ್ 377ರಲ್ಲಿ ಸಲಿಂಗಕಾಮಕ್ಕೆ ಸಂಬಂಧಿಸಿದ ವಿಷಯ ಹೊರತುಪಡಿಸಿ ಬೇರೆ ವಿಷಯಗಳಿಗೆ ನ್ಯಾಯಾಲಯ ಗಮನ ಕೊಡಬಾರದು’ ಎಂದು ಸರ್ಕಾರ ಮನವಿ ಮಾಡಿತ್ತು. ನ್ಯಾಯಾಲಯವು ‘ಸೆಕ್ಷನ್ 377ರ ಅಸ್ತಿತ್ವಕ್ಕೆ ಇರುವ ಸವಾಲುಗಳನ್ನು ಮಾತ್ರ ಪರಿಶೀಲಿಸಲಾಗುವುದು. ನಾಗರಿಕ ಹಕ್ಕುಗಳನ್ನು ನಂತರ ನಿರ್ಧರಿಸಲಾಗುವುದು. ‘ವಯಸ್ಕರು ಸಹಮತದಿಂದ ಸಲಿಂಗ ಕಾಮದಲ್ಲಿ ತೊಡಗುವುದನ್ನು ಅಪರಾಧ ಎನ್ನುವುದು ಸಂವಿಧಾನದ ಆಶಯಗಳ ಉಲ್ಲಂಘನೆ’ ಎಂದು 2013ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾ ಮಾಡಿದ್ದು ಸರಿಯೇ ಎನ್ನುವ ಬಗ್ಗೆ ಪರಿಶೀಲಿಸಲಾಗುವುದು' ಎಂದು ಕೋರ್ಟ್ ಹೇಳಿತ್ತು.

6) ಕೋರ್ಟ್ ಆದೇಶವನ್ನು ಎಲ್‌ಜಿಬಿಟಿ ಸಮುದಾಯ ಸಂಭ್ರಮಿಸಿದ್ದು ಏಕೆ?

‘ನಿಸರ್ಗ ವಿರುದ್ಧವಾದ ಲೈಂಗಿಕ ಸಂಬಂಧ ಅಪರಾಧ’ ಎನ್ನುವ ಐಪಿಸಿ ಸೆಕ್ಷನ್ 377ರ ಅನ್ವಯ ಅಪರಾಧಿಗಳಿಗೆ ದಂಡ, ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿತ್ತು. ಈ ಕಾನೂನನ್ನು ಪೊಲೀಸರು ಎಲ್‌ಜಿಬಿಟಿ ಸಮುದಾಯದ ಶೋಷಣೆಗೆ ಬಳಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿದ್ದವು.

ಇನ್ನಷ್ಟು...

* ಸಮಾನ ಹಕ್ಕು, ಸಮಾನ ಪ್ರೀತಿ: ಸೆಕ್ಷನ್ 377ಕ್ಕೆ ಅಂತ್ಯ ಹಾಡಿದ ಸುಪ್ರೀಂ

*ಲಿಂಗತ್ವ ಅಲ್ಪಸಂಖ್ಯಾತರಿಗೂ ನಾಗರಿಕಹಕ್ಕು–‘ಸುಪ್ರೀಂ’: ಇವರಿಗೂ ಸ್ವಾತಂತ್ರ್ಯ ಬಂತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.