ನವದೆಹಲಿ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಿರುವ ಭದ್ರತೆಯ ವೆಚ್ಚವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಹೇಳಿದೆ.

‘ವೈಯಕ್ತಿಕ ಮಾಹಿತಿ ಮತ್ತು ಭದ್ರತೆ’ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ (ಆರ್‌ಟಿಐ) ಕೆಲವು ಷರತ್ತುಗಳಲ್ಲಿ ವಿನಾಯಿತಿಗಳನ್ನು ನೀಡಲಾಗಿದೆ. ಅದರ ಆಧಾರದ ಮೇಲೆ ಶಾ ಅವರ ಭದ್ರತಾ ವೆಚ್ಚ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿದೆ.

ದೀಪಕ ಜುನೇಜಾ ಎಂಬುವರು 2014ರ ಜುಲೈ 5 ರಂದು ಶಾ ಅವರ ಭದ್ರತಾ ವೆಚ್ಚದ ಮಾಹಿತಿ ನೀಡುವಂತೆ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಇತರೆ ವ್ಯಕ್ತಿಗಳಿಗೆ ಸರ್ಕಾರ ಒದಗಿಸಿರುವ ಭದ್ರತೆಯ ಪಟ್ಟಿ ನೀಡುವಂತೆಯೂ ಅವರು ಅರ್ಜಿಯಲ್ಲಿ ಕೇಳಿದ್ದರು.

ಗೃಹ ಸಚಿವಾಲಯ ಸೆಕ್ಷನ್ 8 (1) (ಜಿ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಉದಾಹರಣೆ ನೀಡಿ, ಮಾಹಿತಿ ನೀಡಲು ನಿರಾಕರಿಸಿತ್ತು. ಸಿಐಸಿ ಸಹ ಮಾಹಿತಿ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಜುನೇಜಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ವಿಭು ಬಖ್ರು ಅವರು, ಅರ್ಜಿದಾರರು ಕೇಳಿರುವ ಮಾಹಿತಿಗೆ ಆರ್‌ಟಿಐ ಅಡಿ ವಿನಾಯಿತಿ ಇದೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಲು ಆಯೋಗಕ್ಕೆ ನಿರ್ದೇಶಿಸಿದ್ದರು.

ಬೆದರಿಕೆ ಇರುವ ಕಾರಣ ಶಾ ಅವರ ಭದ್ರತಾ ವಿಷಯವನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಲು ಸಾಧ್ಯವಿಲ್ಲ.
–ಯಶೋವರ್ಧನ್ ಅಜಾದ್ , ಮಾಹಿತಿ ಆಯೋಗದ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.