ನವದೆಹಲಿ: ಸೈಬರ್ ಅಪರಾಧಗಳನ್ನು ತಡೆಯಲು ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಸೆಲ್ಗಳ ಸ್ಥಾಪನೆ, ಸೈಬರ್ ಅಪರಾಧ ಸ್ಥಳಗಳನ್ನು ಗುರುತಿಸುವಿಕೆ, ಪೊಲೀಸ್ ಪಡೆಗೆ ಐ.ಟಿ. ವೃತ್ತಿಪರರ ನೇಮಕ ಸೇರಿದಂತೆ ವಿವಿಧ ಶಿಫಾರಸುಗಳನ್ನು ಸಂಸದೀಯ ಸಮಿತಿ ಮಾಡಿದೆ.

ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಗೃಹ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು, ‘ಸೈಬರ್ ಅಪರಾಧಿಗಳು ಕೃತ್ಯ ಎಸಗಲು ಡಾರ್ಕ್ವೆಬ್ ಮತ್ತು ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (ವಿಒಐಪಿ) ಬಳಸುತ್ತಿದ್ದಾರೆ. ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಕಾರ್ಯತಂತ್ರವನ್ನು ಇಲಾಖೆಯು ಅಳವಡಿಸಿಕೊಳ್ಳಬೇಕಿದೆ’ ಎಂದು ಹೇಳಿದೆ.

ಸಮಕಾಲೀನ ಸವಾಲುಗಳನ್ನು ಎದುರಿಸಲು ಯಾವುದೇ ಪೊಲೀಸ್ ಪಡೆ ಇನ್ನೂ ಸಜ್ಜಾಗಿಲ್ಲ. ಮೇಲ್ದರ್ಜೆಗೆ ಏರಿಸುವುದು, ಅತ್ಯಾಧುನಿಕ ಕೌಶಲಗಳ ಅಳವಡಿಕೆ, ಅಗತ್ಯ ಸಂಪನ್ಮೂಲ ಒದಗಿಸುವುದು ಅಗತ್ಯವಾಗಿದೆ ಎಂದು ಸಮಿತಿಯು ಹೇಳಿದೆ.

ಕರ್ನಾಟಕ ಬೆಂಗಳೂರು ದೇಶದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿದ್ದರೂ, ರಾಜ್ಯದಲ್ಲಿ ಒಂದೇ ಸೈಬರ್ ಸೆಲ್ ಇದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗೋವಾ, ಮಿಜೋರಾಂ, ಲಡಾಖ್, ಲಕ್ಷದ್ವೀಪಗಳಲ್ಲಿ ಒಂದೂ ಸೈಬರ್ ಸೆಲ್ ಇಲ್ಲ ಎಂದು ಹೇಳಿದೆ.

ದೇಶದಲ್ಲಿ ಈಗ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಹೀಗಾಗಿ, ಸಮಕಾಲೀನ ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆ ಸಜ್ಜುಗೊಳಿಸಬೇಕು. ಡಾರ್ಕ್ ವೆಬ್ ಮೇಲೆ ಕಣ್ಗಾವಲು ಇರಿಸುವಂತೆ ಹಾಲಿ ಸೈಬರ್ ಸೆಲ್ಗಳನ್ನು ಬಲಪಡಿಸಬೇಕಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.