ಮುಂಬೈ: ಇಂದು ಬೆಳಿಗ್ಗೆ ತಮ್ಮ 98ನೇ ವಯಸ್ಸಿಗೆ ನಿಧನರಾದ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುವ ನೆಪದಲ್ಲಿ ಟೀಕಿಸಿದ ನಂತರ ಹರಿಯಾಣ ಬಿಜೆಪಿಯ ಸೋಷಿಯಲ್ ಮೀಡಿಯಾ ಮತ್ತು ಐಟಿ ವಿಭಾಗದ ಮುಖ್ಯಸ್ಥ ಅರುಣ್ ಯಾದವ್ ವಿರುದ್ಧ ಶಿವಸೇನೆ ನಾಯಕಿ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ ನಡೆಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಅರುಣ್ ಯಾದವ್, 'ಚಲನಚಿತ್ರ ಜಗತ್ತಿನಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಹಣ ಸಂಪಾದಿಸಿದ ಮೊಹಮ್ಮದ್ ಯೂಸುಫ್ ಖಾನ್ (ದಿಲೀಪ್ ಕುಮಾರ್) ಅವರ ಸಾವು ಭಾರತೀಯ ಚಲನಚಿತ್ರೋದ್ಯಮಕ್ಕೆ ಭರಿಸಲಾಗದ ನಷ್ಟವಾಗಿದೆ! ದುಃಖಿತ ಕುಟುಂಬಕ್ಕೆ ಸಂತಾಪಗಳು!' ಎಂದಿದ್ದರು.

2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ಜನಪ್ರಿಯ ನಟಿ ಊರ್ಮಿಳಾ ಮಾತೋಂಡ್ಕರ್ ಅವರು, ಮೂರೇ ಮೂರು ಪದಗಳ ಟ್ವೀಟ್ ಮೂಲಕ ಅರುಣ್ ಯಾದವ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಖ್ಯಾತ ನಟ ದಿಲೀಪ್ ಕುಮಾರ್ ಇನ್ನಿಲ್ಲ

'ನಿಮಗೆ ನಾಚಿಕೆಯಾಗಬೇಕು' ಎಂದು 'ಥಂಬ್ಸ್ ಡೌನ್' ಎಮೋಜಿಯೊಂದಿಗೆ ಕಮೆಂಟ್ ಮಾಡಿದ್ದಾರೆ.

ಬಾಲಿವುಡ್ನ ಅತ್ಯುತ್ತಮ ನಟರಲ್ಲಿ ಒಬ್ಬರಾದ ಮತ್ತು ಚಿತ್ರರಂಗದ ಅನೇಕರಿಗೆ ಸ್ಫೂರ್ತಿಯಾದ ದಿಲೀಪ್ ಕುಮಾರ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮುಂಬೈನಲ್ಲಿ ಬುಧವಾರ (ಜು.7) ನಿಧನರಾಗಿದ್ದಾರೆ. ಈ ವಿಚಾರವನ್ನು ಅವರ ಆಪ್ತ ಫೈಸಲ್ ಪಾರೂಖ್ ಎನ್ನುವವರು ದಿಲೀಪ್ ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯ ಮೂಲಕವೇ ತಿಳಿಸಿದ್ದರು.

ಮೊಹಮ್ಮದ್ ಯೂಸುಫ್ ಖಾನ್ ಅವರು 1922ರ ಡಿಸೆಂಬರ್ನಲ್ಲಿ ಪೇಶಾವರದಲ್ಲಿ (ಆಗ ಇದು ಉಪಖಂಡದ ಬ್ರಿಟಿಷ್ ಪ್ರಾಂತ್ಯಗಳ ಭಾಗವಾಗಿತ್ತು) ಜನಿಸಿದರು. ತಮ್ಮ ಮೊದಲ ಚಿತ್ರ 1944ರ 'ಜ್ವಾರ್ ಬಟ್ಟಾ'ದಲ್ಲಿ ನಟಿಸುವ ಮೊದಲು ದಿಲೀಪ್ ಕುಮಾರ್ ಎಂಬ ಹೆಸರನ್ನು ಪಡೆದರು. ಈ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಸದ್ದು ಮಾಡದೆ ಹೋಯಿತು.

ದಿಲೀಪ್ ಕುಮಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು...

ಮರೆಯಾದ ಬಾಲಿವುಡ್ ದಿಗ್ಗಜ ದಿಲೀಪ್ ಕುಮಾರ್; ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ

ದಿಲೀಪ್ ಕುಮಾರ್...ನಟನೆಯಾಚೆಗಿನ ವಿಸ್ತಾರ, ಯೂಸುಫ್ ಖಾನ್ ದಿಲೀಪ್ ಆದ ಕಥೆ

ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ನಿಧನ: ಅಂತ್ಯಕ್ರಿಯೆ ಸಂಜೆ 5 ಗಂಟೆಗೆ

ಸಿನಿಮಾ ನೋಡಿ: ನೋಡಲೇಬೇಕಾದ ದಿಲೀಪ್ ಕುಮಾರ್ ಟಾಪ್ 10 ಸಿನಿಮಾಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.