ನವದೆಹಲಿ: ಮಹಿಳೆಯರಿಗೆ ಗೌರವ ನೀಡುವ ವಿಷಯದ ಸುತ್ತ ರಚಿಸಲಾದ 'ಮಹಾಭಾರತ' ಮತ್ತು 'ರಾಮಾಯಣ' ಮುಂತಾದ ಮಹಾಕಾವ್ಯಗಳ ನೆಲವಾದ ಭಾರತ ದೇಶದಲ್ಲಿ ಮಹಿಳೆಯರ ಮೇಲೆ ಅಪರಾಧ ಮತ್ತು ಹಿಂಸಾಚಾರದ ಕೃತ್ಯಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೆಹಲಿ ನ್ಯಾಯಾಲಯ ಬುಧವಾರ ಹೇಳಿದೆ.

ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್ ಅವರು ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ಸಂದರ್ಭ ದೆಹಲಿಯ ಹೆಚ್ಚುವರಿ ಮೆಟ್ರೋಪಾಲಿಟನ್ ಮುಖ್ಯ ನ್ಯಾಯಾಧೀಶ ರವೀಂದ್ರ ಕುಮಾರ್ ಪಾಂಡೆ ಈ ಮಾತನ್ನು ಹೇಳಿದ್ದಾರೆ.

"ಮಹಿಳೆಯರಿಗೆ ಗೌರವ ಎಂಬ ವಿಷಯದ ಸುತ್ತ 'ಮಹಾಭಾರತ' ಮತ್ತು 'ರಾಮಾಯಣ' ಮುಂತಾದ ಮಹಾಕಾವ್ಯಗಳನ್ನು ರಚಿಸಲಾಗಿರುವ ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಮತ್ತು ಹಿಂಸಾಚಾರದ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, " ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ.. ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

ಧಾರ್ಮಿಕ ಗ್ರಂಥಗಳನ್ನು ಉಲ್ಲೇಖಿಸಿ, “ವಾಲ್ಮೀಕಿ ರಾಮಾಯಣದಲ್ಲಿ, ಬಹಳ ಗೌರವದ ಉಲ್ಲೇಖವು ಕಂಡುಬರುತ್ತದೆ, ರಾಜಕುಮಾರ ಲಕ್ಷ್ಮಣನನ್ನು ರಾಜಕುಮಾರಿ ಸೀತೆಯ ಬಗ್ಗೆ ವಿವರಿಸಲು ಕೇಳಿದಾಗ, ಅವನು ಸೀತೆಯ ಪಾದಗಳನ್ನು ಮಾತ್ರ ನೆನಪಿಸಿಕೊಳ್ಳುತ್ತಾನೆ. ಏಕೆಂದರೆ, ಸೀತೆಯ ಪಾದಗಳನ್ನು ಬಿಟ್ಟು ಲಕ್ಷಣ ಬೇರೆ ಏನನ್ನೂ ಗಮನಿಸಿರಲಿಲ್ಲ. ” ಎಂದು ನ್ಯಾಯಾಧೀಶರು ರಾಮಾಯಣದಲ್ಲಿ ಮಹಿಳೆಯರ ಗೌರವದ ವಿಷಯದ ಉಲ್ಲೇಖವನ್ನು ಒತ್ತಿ ಹೇಳಿದ್ದಾರೆ.

'ರಾಮ್ಚರಿತ್ಮನಸ್ನ ಅರಣ್ಯ ಕಾಂಡದಲ್ಲಿ, "ಮಹಿಳೆಯರ ಘನತೆಯನ್ನು ರಕ್ಷಿಸುವ, ಗೌರವಿಸುವ ಮತ್ತು ಉತ್ತೇಜಿಸುವ ಉದಾತ್ತ ಸಂಪ್ರದಾಯದ ಉಲ್ಲೇಖವಿದೆ. ರಾಜಕುಮಾರಿ ಸೀತೆಯನ್ನು ರಾವಣ ಅಪಹರಿಸಿದಾಗ ಉದಾತ್ತ 'ಜಟಾಯು' (ಪೌರಾಣಿಕ ಪಕ್ಷಿ) ರಕ್ಷಣೆಗೆ ನಿಲ್ಲುತ್ತಾನೆ ಎಂದು ಮಹಿಳೆಯರ ರಕ್ಷಣೆಯ ಕುರಿತಾದ ಉಲ್ಲೇಖವನ್ನು ನ್ಯಾಯಾಲಯ ಇಲ್ಲಿ ಪ್ರಸ್ತಾಪಿಸಿದೆ.

"ಉದಾತ್ತ ಪಕ್ಷಿ 'ಜಟಾಯು' ಗಾಯಗೊಂಡು ಸಾಯುತ್ತಿದ್ದರೂ, ರಾಜಕುಮಾರಿ ಸೀತಾಳನ್ನು ರಾವಣ ಅಪಹರಿಸಿದ ಮಾಹಿತಿಯನ್ನು ರಾಮ ಮತ್ತು ಲಕ್ಷ್ಮಣನಿಗೆ ರವಾನಿಸಲು ಅವರು ಸಾಕಷ್ಟು ಕಾಲ ಬದುಕಿತ್ತು" ಎಂದು ನ್ಯಾಯಾಲಯವು ತಿಳಿಸಿದೆ.

"ಅದೇ ರೀತಿ, 'ಮಹಾಭಾರತದ ಸಭಾ ಪರ್ವ'ದಲ್ಲಿ, ಕುರು ರಾಜಸಭೆಗೆ ದುಶ್ಯಾಸನ ತಮ್ಮನ್ನು ಎಳೆದು ತಂದ ಘಟನೆಯ ಕಾನೂನು ಬದ್ಧತೆ ಕುರಿತಂತೆ ರಾಣಿ ದ್ರೌಪದಿ ಮಾಡಿದ ಮನವಿಯ ಬಗ್ಗೆ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.