ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಅವರೊಂದಿಗೆ ಇರುವ ಶಾಸಕರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಜನವರಿ 10ರಂದು ಸ್ಪೀಕರ್ ರಾಹುಲ್ ನರ್ವೆಕರ್ ತೀರ್ಪು ನೀಡಲಿದ್ದಾರೆ ಎಂದು ವಿಧಾನಭವನದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ಸ್ಪೀಕರ್ ಕಚೇರಿ ತೀರ್ಪನ್ನು ಅಂತಿಮಗೊಳಿಸಿದ್ದು, ಜನವರಿ 10ರಂದು ಸಂಜೆ 4 ಗಂಟೆಗೆ ಹೊರಬೀಳಲಿದೆ’ ಎಂದು ತಿಳಿಸಿದ್ದಾರೆ.

2022 ಜೂನ್‌ನಲ್ಲಿ ಶಿಂದೆ ಮತ್ತು ಹಲವು ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಶಿವಸೇನೆಯನ್ನು ವಿಭಜಿಸುವ ಮೂಲಕ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗಿನ ಮಹಾ ವಿಕಾಸ್ ಆಘಾಡಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು.

ಈ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳುವಂತೆ ಎರಡೂ ಬಣದವರು ಸ್ಪೀಕರ್‌ಗೆ ಮನವಿ ಮಾಡಿದ್ದರು. ಈ ಬಗ್ಗೆ 2022ರ ಡಿಸೆಂಬರ್ 31ರೊಳಗೆ ತೀರ್ಪು ಪ್ರಕಟಿಸುವಂತೆ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್, ಬಳಿಕ 10 ದಿನ ವಿಸ್ತರಿಸಿ ಜ.10ರೊಳಗೆ ತೀರ್ಪು ನೀಡುವಂತೆ ಸ್ಪೀಕರ್ ಅವರಿಗೆ ಸೂಚಿಸಿತ್ತು.

‘ಸ್ಪೀಕರ್ ತೀರ್ಪು ನಮ್ಮ ಪರವಾಗಿ ಬರದಿದ್ದರೆ, ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಎರಡೂ ಬಣಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.