ಮಲಪ್ಪುರ (ಕೇರಳ): ಅಯ್ಯಪ್ಪ ಸ್ವಾಮಿ ಕುರಿತ ಚಲನಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಗಳಿ ಹಾಕಿದ್ದ ಪೋಸ್ಟ್ಗಳ ಬಗ್ಗೆ ಆಕ್ರೋಶಗೊಂಡ ಕೆಲವರು ಸಿಪಿಐ ಸ್ಥಳೀಯ ಮುಖಂಡ ಸಿ.ಪ್ರಗಿಲೇಶ್ ಒಡೆತನದ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಉನ್ನಿ ಮುಕುಂದನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಮಲಿಕಪ್ಪುರಂ’ ಚಿತ್ರವನ್ನು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ಗಳನ್ನು ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗಳು ನಡೆದಿತ್ತು. ಕೆಲವರು ಅಂಗಡಿ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಪ್ರಗಿಲೇಶ್ ಆರೋಪಿಸಿದ್ದಾರೆ.

ಕೇರಳದ ಮಲಪ್ಪುರ ಜಿಲ್ಲೆಯಲ್ಲಿರುವ ಪ್ರಗಿಲೇಶ್ ಅವರ ಧ್ವನಿವರ್ಧಕ ಅಂಗಡಿ ಮೇಲೆ ಜ.1ರಂದು ದಾಳಿ ನಡೆದಿದ್ದು, ಅಂಗಡಿಯಲ್ಲಿ ಇರಿಸಲಾಗಿದ್ದ ಹೊಸದಾಗಿ ತರಿಸಿದ್ದ ಬೋರ್ಡ್, ಅಲಂಕಾರಿಕ ದೀಪಗಳು ಹಾನಿಗೊಳಗಾಗಿವೆ. ಆಸ್ತಿ ನಾಶ ಕುರಿತು ಮಂಗಳವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.