ಗ್ಯಾಂಗ್ಟಕ್: ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿಆಡಳಿತಾರೂಢ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್ಡಿಎಫ್) ಸೋಲು ಕಂಡಿದ್ದು ವಿರೋಧ ಪಕ್ಷವಾಗಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ)ಸರಳ ಬಹುಮತ ಪಡೆದಿದೆ.

ಆಡಳಿತಾರೂಢಎಸ್ಡಿಎಫ್ ಮತ್ತುಎಸ್ಕೆಎಂ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಅಂತಿಮವಾಗಿ ಮತದಾರ ಪ್ರಭುಗಳು ಎಸ್ಕೆಎಂ ಪಕ್ಷವನ್ನು ಕೈಹಿಡಿದಿದ್ದಾರೆ.

32 ವಿಧಾನಸಭಾ ಕ್ಷೇತ್ರಗಳಿರುವ ಸಿಕ್ಕಿಂ ರಾಜ್ಯದಲ್ಲಿ ಅಧಿಕಾರಕ್ಕೇರಲು ಸರಳ ಬಹುಮತ 17 ಸ್ಥಾನ ಗಳಿಸಬೇಕು. ಮತ ಎಣಿಕೆ ಆರಂಭದಲ್ಲಿ ಸಮಬಲದ ಸ್ಥಾನಗಳನ್ನು ಎರಡೂ ಪಕ್ಷಗಳು ಪಡೆದಿದ್ದವು. ಆದರೆ ಸಂಜೆ ವೇಳೆಗೆ ಸಿಕ್ಕಿಂನ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿ ಎಸ್ಕೆಎಂ ಮುನ್ನಡೆ ಸಾಧಿಸಿತು. ಈ ಮೂಲಕಎಸ್ಡಿಎಫ್ನ ಪವನ್ ಕುಮಾರ್ ಚಾಮ್ಲಿಂಗ್ ಅವರ ಆರನೇ ಬಾರಿ ಮುಖ್ಯಮಂತ್ರಿ ಆಗುವ ಕನಸನ್ನುನುಚ್ಚು ನೂರಾಯಿತು.

ಎಸ್ಡಿಎಫ್ 15, ಎಸ್ಕೆಎಂ 17 ಸ್ಥಾನಗಳನ್ನು ಪಡೆದಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿವೆ.ಚುನಾವಣಾ ಆಯೋಗದ ಲೆಕ್ಕಾಚಾರದಂತೆ ಎಸ್ಡಿಎಫ್ಶೇ 46.8ರಷ್ಟು ಮತ ಗಳಿಸಿದ್ದರೆ, ಎಸ್ಕೆಎಂಶೆ 47.4ರಷ್ಟು ಮತ ಗಳಿಸಿದೆ.

ಭಾರತದ ಮೊದಲ ಸಂಪೂರ್ಣ ನಿರ್ಮಲ ರಾಜ್ಯ ಎಂಬ ಶ್ರೇಯ ಸಿಕ್ಕಿಂನದು. 1975ರಲ್ಲಿ ಭಾರತ ಒಕ್ಕೂಟಕ್ಕೆ ಸೇರಿದ ಸಿಕ್ಕಿಂನಲ್ಲಿಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ. ಇಲ್ಲಿಯವರೆಗೂ ಅಲ್ಲಿ ರಾಷ್ಟ್ರೀಯ ಪಕ್ಷಗಳು ನೆಲೆಯೂರಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.